ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರ ದಿನದಿಂದ ದಿನಕ್ಕೆ ವಿಭಿನ್ನ ತಿರುವುಗಳನ್ನ ಪಡೆದುಕೊಳ್ತಿದೆ.. ಡ್ರಗ್ ಮಾಫಿಯಾ ವಿಚಾರದ ಬಗ್ಗೆ ಸ್ಪೋಟಕ ಮಾಹಿತಿಯನ್ನ ರಿವೀಲ್ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನ ನೆನ್ನೆಯಷ್ಟೇ ಸಿಸಿಬಿ ವಿಚಾರಣೆ ನಡೆಸಿತ್ತು.. ಇನ್ನೊಂದೆಡೆ ನಟಿ ರಾಗಿಣಿ ಹೆಸರು ಈ ಡ್ರಗ್ ಮಾಫಿಯಾ ವಿಚಾರದಲ್ಲಿ ಕೇಳಿ ಬಂದಿದ್ರಿಂದ, ರಾಗಿಣಿಯ ಆಪ್ತ ಸ್ನೇಹಿತ ರವಿಶಂಕರ್ ನನ್ನೂ ಕೂಡ ಸಿಸಿಬಿ ವಿಚಾರಣೆ ನಡೆಸಿತ್ತು.. ಅಲ್ಲದೆ ನಟಿ ರಾಗಿಣಿಗೂ ನೋಟಿಸ್ ನೀಡಿದ್ದ ಸಿಸಿಬಿ ನೆನ್ನೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.. ಆದ್ರೆ ರಾಗಿಣಿ ಯಾವುದೋ ಕಾರಣವನ್ನ ಹೇಳಿ ಸಿಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ರು.. ಸೋಮವಾರ ವಿಚಾರಣೆಗೆ ಹಾಜರಾಗೋದಾಗಿ ತಮ್ಮ ವಕೀಲರ ಮೂಲಕ ಸಿಸಿಬಿ ಕಛೇರಿಗೆ ಹೇಳಿ ಕಳಿಸಿದ್ರು.. ಆದ್ರೆ ರಾಗಿಣಿಯ ಈ ನಡೆ ಬಗ್ಗೆ ಬೇಸರಗೊಂಡಿದ್ದ ಸಿಸಿಬಿ ರಾಗಿಣಿ ಅವರನ್ನ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ರು.. ಜೊತೆಗೆ ಅನುಮಾನದ ಮೇಲೆ ಇಂದು ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಅವರ ಮನೆಯನ್ನ ರೈಡ್ ಮಾಡಿದ್ರು..
ಎಸ್, ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿವಾದಕ್ಕೆ ಸಂಬಂಧಿಸಿದಂತೆ ಯಲಹಂಕದಲ್ಲಿರುವ ಅನನ್ಯ ಅಪಾರ್ಟ್ ಮೆಂಟ್ ನಲ್ಲಿರುವ ರಾಗಿಣಿ ಅವರ ನಿವೇಶನದ ಮೇಲೆ ಇಂದು ಬೆಳಗ್ಗೆ ಸಿಸಿಬಿ ರೈಡ್ ಮಾಡಿದೆ.. ಈ ವೇಳೆ ನಟಿ ರಾಗಿಣಿ ಕೂಡ ಮನೆಯಲ್ಲೇ ಇದ್ದರು.. ಹೀಗೆ ಸಿಸಿಬಿಯ ಏಕಾಯೇಕಿ ದಾಳಿಯಿಂದ ನಟಿ ರಾಗಿಣಿಗೆ ಶಾಕ್ ಆಗಿದೆ.. ಮನೆಯನ್ನ ರೈಡ್ ಮಾಡುವ ಸಮಯದಲ್ಲಿ ರಾಗಿಣಿ ಹಾಗೂ ಮನೆಯಲ್ಲಿದ್ದ ಎಲ್ಲಾ ಸದಸ್ಯರ ಮೊಬೈಲ್ ಗಳು ಹಾಗೂ ಎರಡು ಲ್ಯಾಪ್ ಗಳು ಸೇರಿದಂತೆ ಇನ್ನೂ ಕೆಲ ದಾಖಲೆಗಳನ್ನ ಸಿಸಿಬಿ ವಶಪಡಿಸಿಕೊಂಡಿದೆ.. ಜೊತೆಗೆ ನಟಿ ರಾಗಿಣಿಗೆ ಸಂಬಂಧಿಸಿದ ಎರಡು ಬ್ಯಾಗ್ ಗಳನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ.. ಇನ್ನೂ ರಾಗಿಣಿ ವಾಟ್ಸಾಪ್ ನ್ನ ಚೆಕ್ ಮಾಡಿದಾಗ ಅದರಲ್ಲಿ ಕೆಲ ವ್ಯಕ್ತಿಗಳೊಂದಿಗೆ ಚಾಟ್ ಮಾಡಿರೋದನ್ನ ಡಿಲೀಟ್ ಮಾಡಿರೋದು ಸಾಕಷ್ಟು ಸಂದೇಹಗಳಿಗೆ ಕಾರಣವಾಗಿದೆ..
ತಮ್ಮ ಬಳಿ ಇರುವ ದಾಖಲೆಗಳನ್ನ ನಾಶಪಡಿಸೋದಕ್ಕಾಗೇ ನಟಿ ರಾಗಿಣಿ ನೆನ್ನೆ ವಿಚಾರಣೆಗೆ ಗೈರು ಹಾಜರಾಗಿದ್ರಾ ಅನ್ನೋ ಅನುಮಾನಗಳು ಮೂಡಿವೆ.. ಇನ್ನೂ ರವಿಶಂಕರ್ ಸುಮಾರು ನಾಲ್ಕು ವರ್ಷಗಳಿಂದ ನಟಿ ರಾಗಿಣಿ ಅವರೊಂದಿಗೆ ಒಡನಾಟದಲ್ಲಿದ್ದು, ಅವರಿಗಾಗಿ ಸಾಕಷ್ಟು ಹಣ ಖರ್ಚು ಮಾಡ್ತಿದ್ರು ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.. ವಿಚಾರಣೆ ವೇಳೆ ರಾಗಿಣಿಗೆ ಸಂಬಂಧಿಸಿದಂತೆ ರವಿಶಂಕರ್ ಕೆಲ ದಾಖಲೆಗಳನ್ನ ಸಿಸಿಬಿ ಸಿಬ್ಬಂದಿಗೆ ನೀಡಿದ್ದಾರೆ.. ಈ ಹಿನ್ನೆಲೆಯಲ್ಲಿ ಇಂದು ರಾಗಿಣಿ ಹಾಗೂ ಆಕೆಯ ಸ್ನೇಹಿತ ರವಿಶಂಕರ್ ಇಬ್ಬರನ್ನೂ ಸಿಸಿಬಿ ವಿಚಾರಣೆಗೆ ಒಳಪಡಿಸಿದೆ..
ಸಿಸಿಬಿ ವಿಚಾರಣೆಯಲ್ಲಿ ನಟಿ ರಾಗಿಣಿ ಹಾಗೂ ರವಿಶಂಕರ್ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಏನೆಲ್ಲಾ ಹೇಳಿ ಕೆಗಳನ್ನ ನೀಡಲಿದ್ದಾರೆ ಹಾಗೂ ಯಾವೆಲ್ಲಾ ದಾಖಲೆಗಳನ್ನ ಕೊಡಲಿದ್ದಾರೆ ಅನ್ನೋದು ಸದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ನಟಿ ರಾಗಿಣಿ ವಿರುದ್ಧ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ ಅನ್ನೋ ಮಾಹಿತಿಯನ್ನ ತಿಳಿಸಿದ್ದಾರೆ.. ಹೀಗಾಗಿ ನಟಿ ರಾಗಿಣಿ ಅವರನ್ನ ಸಿಸಿಬಿ ಅರೆಸ್ಟ್ ಮಾಡಬಹುದಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.. ಸಂಪೂರ್ಣ ವಿಚಾರಣೆ ಮುಗಿದ ಬಳಿಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ