ವಿಕೇಂಡ್‌ನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದ ಸ್ಯಾಂಡಲ್‌ವುಡ್‌ಗಿಂದು ಶಾಕಿಂಗ್ ನ್ಯೂಸ್ ಒಂದು ಬರಸಿಡಿಲಿನಂತೆ ಬಂದೆರಗಿತ್ತು. ಒಂದು ಕ್ಷಣ ಈ ಸುದ್ದಿ ಸುಳ್ಳಾಗಬಾರದಾ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಚಿರಂಜೀವಿ ಸರ್ಜಾ ತಮ್ಮ ಬದುಕಿನ ಪಯಣ ಮುಗಿಸಿದ್ದರು.
ಹೌದು, ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ(39) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದಾರೆ.

1980 ಅಕ್ಟೋಬರ್ 17ರಂದು ಜನಿಸಿದ ಚಿರಂಜೀವಿ ಸರ್ಜಾ, ಬೆಂಗಳೂರಿನಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ಬೋಲ್ಡ್‌ವಿನ್ ಬಾಯ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಚಿರು, ವಿಜಯ ಕಾಲೇಜ್‌ನಲ್ಲಿ ಗ್ರ್ಯಾಜುಯೇಶನ್ ಮುಗಿಸಿದರು.

ಸ್ಯಾಂಡಲ್‌ವುಡ್ ಖಳನಾಯಕರಾಗಿದ್ದ ಶಕ್ತಿ ಪ್ರಸಾದ್ ಅವರ ಮೊಮ್ಮಗರಾಗಿದ್ದ ಚಿರಂಜೀವಿ ಸರ್ಜಾ, ಮಾವ ಅರ್ಜುನ್ ಸರ್ಜಾರೊಂದಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದಾರೆ. 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದು, ಚಿರು, ಗಂಡೆದೆ, ವರದನಾಯಕ, ದಂಡಂ ದಶಗುಣಂ, ಸಿಂಗ, ಶಿವಾರ್ಜುನ , ಅಮ್ಮ ಐ ಲವ್ ಯೂ ಸೇರಿ ಹಲವು ಚಿತ್ರಗಳಲ್ಲಿ ಚಿರಂಜೀವಿ ನಟಿಸಿದ್ದಾರೆ.
ಮೇ 2, 2018ರಲ್ಲಿ ಚಿರಂಜೀವಿ ಸರ್ಜಾ ಮೇಘನಾ ರಾಜ್ ಜೊತೆ ಹಸೆಮಣೆ ಏರಿದ್ದರು.

ಇನ್ನು ಚಿರಂಜೀವಿ ಜೊತೆ ಕೆಲಸ ಮಾಡಿದವರಲ್ಲಿ ಎಲ್ಲರೂ ಹೇಳುವುದು ಒಂದೇ, ನಟ ಎಂಬ ಅಹಂ ಇಲ್ಲದ ಚಿರು, ಎಲ್ಲರೊಂದಿಗೆ ಸ್ನೇಹಿತರ ತರ ಇರುತ್ತಿದ್ದರು. ಶೂಟಿಂಗ್ ಸ್ಪಾಟ್‌ಗೆ ಬಂದಾಗ ಎಲ್ಲರನ್ನೂ ನಗಿಸುತ್ತ, ನಗುತ್ತ ಎಲ್ಲರನ್ನೂ ತಮ್ಮವರಂತೆ ಕಾಣುತ್ತಿದ್ದರಂತೆ.
ಅಲ್ಲದೇ, ಲಾಕ್‌ಡೌನ್ ಟೈಮಲ್ಲಿ ತಮ್ಮ ಕುಟುಂಬದ ಜೊತೆ ಕಳೆದ ಖುಷಿಯ ಕ್ಷಣಗಳ ವೀಡಿಯೋ, ಫೋಟೋವನ್ನ, ಬಾಲ್ಯದ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಮೊನ್ನೆ ಮೊನ್ನೆ ತಾನೇ ರಂಜಾನ್ ಹಬ್ಬದಂದು ಮೇಘನಾ ರಾಜ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದ ಚಿರು ರಂಜಾನ್ ಹಬ್ಬದ ಶುಭಕೋರಿದ್ದರು.

ಆದ್ರೆ ಇಂದು ಹೃದಯಾಘಾತದ ಹಿನ್ನೆಲೆ ಚಿರು ಕೊನೆಯುಸಿರೆಳೆದಿದ್ದಾರೆ. ಇನ್ನು ಮಾಹಿತಿಯ ಪ್ರಕಾರ ಮೇಘನಾರಾಜ್ ಗರ್ಭಿಣಿಯಾಗಿದ್ದಾರೆನ್ನಲಾಗಿದೆ.