Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸೂರ್ಯವಂಶ ಸಿನಿಮಾ ಬಗ್ಗೆ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ನೀಡುವ ಸಂಬಳದ ಬಗ್ಗೆ ಮಾತನಾಡಿದ್ದಾರೆ.
ಹಲವು ಬಾರಿ ಹಬ್ಬದ ಸಮಯದಲ್ಲಿ ಜೇಬು ಖಾಲಿಯಾಗಿದ್ದಂಥ ಸಂದರ್ಭಗಳು ಬಂದಿತ್ತು ಅಂತಾ ತಮ್ಮ ಹಳೆಯ ದಿನಗಳನ್ನು ನೆನೆಸಿಕ“ಂಡಿದ್ದಾರೆ ಮೂಗು ಸುರೇಶ್ ಅವರು. ಸಿನಿಮಾದಲ್ಲಿ ನಟಿಸಿದರೂ, ಸರಿಯಾಗಿ ಪೇಮೇಂಟ್ ಸಿಗದೇ ಇರುವ ಸಮಯವೂ ಇತ್ತು.
ಆ ಸಮಯದಲ್ಲಿ ಕೆಲವೇ ಕೆಲವು ಬಟ್ಟೆಗಳು ಇತ್ತು. ಹಾಗಾಗಿ ಅದರಲ್ಲೇ ದಿನಗಳೆಯಬೇಕಿತ್ತು. ಬರುವ ಸಂಬಳ ನೀಡುವ ಪೇಮೆಂಟ್ ಸಾಕಾಗುತ್ತಿರಲಿಲ್ಲ. ಆಫೀಸ್ ಕೆಲಸಕ್ಕೆ ಸೇರಿದ ಬಳಿಕ ಚೆನ್ನಾಗಿ ಸಂಬಳ ಬರುತ್ತಿತ್ತು. ಆದರೆ ಸರಿಯಾಗಿ ಸಂಬಳ ಬರದಿದ್ದಾಗ ಮತ್ತು ಸಿನಿಮಾದಲ್ಲಿ ದುಡ್ಡು ಬರದಿದ್ದಾಗ, ಸಿನಿಮಾ ಕೆಲಸ ಬೇಡವೆನ್ನಿಸುತ್ತಿತ್ತು. ಆದರೆ ಕೆಲವರು ಸಿಕ್ಕಾಗ ನೀವು ಆ ಸಿನಿಮಾದಲ್ಲಿ ನಟಿಸಿದ್ದಿರಲ್ಲಾ ಅಂತಾ ಪರಿಚಯ ಮಾಡಿ ಮಾತನಾಡಿಸುತ್ತಿದ್ದರು. ಅದೇ ನಮಗೆ ಮುಂದಿನ ಸಿನಿಮಾದಲ್ಲಿ ನಟಿಸಲು ಶಕ್ತಿ ನೀಡುತ್ತಿತ್ತು ಅಂತಾರೆ ಮೂಗು ಸುರೇಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

