Sandalwood: ಸದ್ಯ ಕಲಾವಿದೆಯಾಗಿ ಕನ್ನಡ ಸಿರಿಯಲ್‌ನಲ್ಲಿ ಮಿಂಚುತ್ತಿರುವ ನಟಿ ಹರಿಣಿ ಶ್ರೀಕಾಂತ್, ಈ ಮುನ್ನ ನಿರೂಪಕಿಯಾಗಿದ್ರು. ಹಾಗಾದ್ರೆ ಅವರು ಯಾವ ಚಾನೆಲ್‌ನಿಂದ ತಮ್ಮ ಕಲಾಪಯಣ ಶುರು ಮಾಡಿದ್ರು..? ಏನೇನು ನಿರೂಪಣೆ ಮಾಡ್ತಿದ್ರು..? ಈ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.
ಹರಿಣಿ ಅವರಿಗೆ ಉದಯ ಟಿವಿಯಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತು. ಯಾವುದಾದರೂ ಸಾಂಗ್ ರಿಲೀಸ್ ಆದರೆ, ಆ ಸಾಂಗ್, ಮೂವಿ ಬಗ್ಗೆ ವಿವರಿಸಬೇಕಿತ್ತು. ಅಂಥ ನಿರೂಪಣೆಯ ಅವಕಾಶ ಹರಿಣಿ ಅವರಿಗೆ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಹರಿಣಿ ಅದೆಷ್ಟು ಚೆಂದವಾಗಿ ನಿಭಾಯಿಸಿದರೆಂದರೆ, ತಮ್ಮ ಜತೆಗಿದ್ದ ಹಿರಿಯ ನಿರೂಪಕರಿಂದ ಸಹಾಾಯಕವಾಗು ರೀತಿಗಳನ್ನು ಅವರು ಕಲಿತು, ನಿರೂಪಣಾ ಶೈಲಿಯಲ್ಲಿ ಅಭಿವೃದ್ಧಿ ಮಾಡಲು ಪ್ರಯತ್ನಿಸಿದರು. ಅದೇ ಪ್ರಯತ್ನವೇ ಇಂದು ಅವರು ಅರಳು ಹುರಿದಂತೆ ಮಾತನಾಡಲು ಕಾರಣ.
ಇದಾದ ಬಳಿಕ ನೀಲ ಮೇಘ ಶಾಮ ಸಿನಿಮಾದಲ್ಲಿ ಹರಿಣಿ ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದು, ರಾಧಿಕಾ ಅವರಿಗೆ ಧ್ವನಿ ನೀಡಿದ್ದರು. ಹೀಗೆ ಡಬ್ಬಿಂಗ್ ಜರ್ನಿ ಶುರುವಾಯ್ತು. ಇನ್ನು ಡಬ್ಬಿಂಗ್ ಮಾಡುವಾಗ, ಚೆನ್ನಾಗಿ ಧ್ವನಿ ಸೂಟ್ ಆಗಬೇಕು ಅಂದ್ರೆ, ತನ್ನಿಂದ ತಾನೇ ಡಬ್ಬಿಂಗ್ ಕಲಾವಿದರು, ನಟನೆ ಮಾಡುತ್ತಾರೆ. ಹೀಗೆ ಹರಿಣಿ ಅವರ ನಟನೆಯನ್ನು ಗಮನಿಸಿದ ಓರ್ವ ವ್ಯಕ್ತಿ, ಇವರಿಗೆ ಪ್ರತಿಭೆ ಅನ್ನೋ ಸಿರಿಯಲ್ ನಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ಹರಿಣಿಯವರ ನಟನಾ ಜರ್ನಿ ಶುರುವಾಯ್ತು. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.