Sandalwood News: ನಟ ರಘು ಅವರು ನಟನೆ ಮತ್ತು ನಿರ್ದೇಶನಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು. ಬೆಂಗಳೂರಿಗೆ ಕೆಲಸ ಅರಸಿ ಬಂದ ರಘುಗೆ ಕರೆದು ಕೆಲಸ ನೀಡಿದ್ಯಾರು..? ನಿನಗೆ ನಟನಾಗುವ ಟ್ಯಾಲೆಂಟ್ ಇದೆ. ಮುಂದುವರಿ ಎಂದು ಹುರಿದುಂಬಿಸಿದ್ದು ಯಾರು..? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಘು ಅವರು 5ನೇ ಕ್ಲಾಸಿನಿಂದ ನಿನಾಸಂಗೆ ಹೋಗುವವರೆಗೂ ಗಾರೆ ಕೆಲಸ ಮಾಡುತ್ತಿದ್ದರು. ಅದು ಬಿಟ್ಟು ಆಟೋ ಓಡಿಸುವುದು, ನಟನೆ, ನಿರ್ದೇಶನ ಇದಷ್ಟೇ ರಘುವಿಗೆ ಬರುತ್ತಿದ್ದ ಕೆಲಸ.
ಹಾಗಾಗಿ ರಘು ನಟನಾಗಲು ಬೆಂಗಳೂರಿಗೆ ಕೆಲಸ ಅರಸಿ ಬಂದಾಗ, ಅವರಿಗೆ ಕರೆದು, ಮಾತನಾಡಿ, ಕಲಾವಿದನಾಗಲು ಹುರಿದುಂಬಿಸಿದ್ದು, ಹಿರಿಯ ನಟ ಪ್ರಕಾಶ್ ಬೆಳವಾಡಿ. ಅವರೇ ನನ್ನ ಗಾಡ್‌ಫಾದರ್ ಅಂತಾರೆ ರಘು.
ಹೀಗೆ 1 ಕೆಲಸ ಸಿಕ್ಕ ಬಳಿಕ, ಹಲವು ಪ್ರಯತ್ನಗಳು ನಡೆದ ಬಳಿಕ ಸಾಲು ಸಾಲು ಅವಕಾಶಗಳು ರಘುಗೆ ಸಿಗುತ್ತ ಹೋಯಿತು. ರಘು ಸಿನಿರಂಗಕ್ಕೆ ಬಂದು 20 ವರ್ಷವಾಯಿತು. ಈ ಜರ್ನಿಯಲ್ಲಿ ರಘು ಅವರ ಹಾದಿ ಹೆಚ್ಚು ಕ್ಲಿಷ್ಟಕರವೂ ಆಗಿರಲಿಲ್ಲ, ಸುಲಭವೂ ಆಗಿರಲಿಲ್ಲ ಅಂತಾರೆ ರಘು.
ಇನ್ನು ನಿಮಗೆ ಯಾವಾಗಲಾದರೂ ಸಿನಿಮಾ ವಿಷಯದಲ್ಲಿ ಅವಮಾನವಾಗಿದೆಯಾ ಅಂತಾ ಪ್ರಶ್ನೆ ಕೇಳಿದಾಗ, ನಿರ್ದೇಶಕರ“ಬ್ಬರು ಕೆಲಸಕ್ಕೆ ಕರೆದಾಗ ಅವರ ಬಗ್ಗೆ ತಿಳಿಯದೇ, ಹಾಗೆ ಹೋಗಿದ್ದೆ. ಅಲ್ಲಿ ಸ್ವಲ್ಪ ಬೈದರು. ತಪ್ಪು ನನ್ನದೇ ಆಗಿದ್ದರಿಂದ ಸ್ವಲ್ಪ ಬೇಸರವೂ ಆಯಿತು ಎಂದು ರಘು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.