Sandalwood: ನಟ ಅನಿರುದ್ಧ ಸಿನಿಮಾಗಾಗಿ ಬಣ್ಣ ಹಚ್ಚಿ 2025ರಲ್ಲೇ 25 ವರ್ಷವಾಗಿದೆ. ಆದರೆ ರಂಗಭೂಮಿ ನಂಟು ಮಾತ್ರ ಹಳೆಯದ್ದು. ಇನ್ನು ಅನಿರುದ್ಧ ಅವರು ಹಲವು ಸಿರಿಯಲ್, ಜಾಹೀರಾತು, ಟೆಲಿಫಿಲಂ ಎಲ್ಲದರಲ್ಲೂ ನಟಿಸಿದ್ದಾರೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ.
ನಾನು 6 ಅಡಿ ವ್ಯಕ್ತಿ ಅಲ್ಲ, ಸಿಕ್ಸ್ ಪ್ಯಾಕ್ ವ್ಯಕ್ತಿ ಅಲ್ಲ, ಅಮಿತಾಬ್ ಬಚ್ಚನ್ ರೀತಿ ನನಗೆ ವಾಯ್ಸ್ ಇಲ್ಲ. ಆದರೂ ಜನ ನನಗಿಷ್ಟು ಪ್ರೀತಿ ನೀಡಿದ್ದಾರೆ. ಅವರಿಂದಲೇ ನಾನು ನನ್ನ ನಟನಾ ಜರ್ನಿಯಲ್ಲಿ ಇಲ್ಲಿಯವರೆಗೂ ಬಂದಿದ್ದೇನೆ. ನಾನಿಂದು ಏನಿದ್ದೇನೋ, ಅದೆಲ್ಲ ಜನರಿಂದಲೇ ಅಂತಾ ಹೇಳ್ತಾರೆ ಅನಿರುದ್ಧ.
ಅಲ್ಲದೇ ನಾನೀಗ ಮಾಡುತ್ತಿರು ಸ್ವಚ್ಛತಾ ಕಾರ್ಯವಾಗಲಿ, ಸಮಾಜಸೇವೆಯಾಗಲಿ, ಜನರಿಂದ ಸಿಕ್ಕ ಪ್ರೀತಿಗೆ ಪ್ರತಿಫಲವಾಗಿ ಏನಾದರೂ ನೀಡಬೇಕು ಎಂಬ ಕಾರಣಕ್ಕೆ ಆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ ಅನಿರುದ್ಧ.
ಇನ್ನು ಅಕ್ಷಯ್ ಖನ್ನಾ ಜರ್ನಿ ಬಗ್ಗೆ ಮಾತನಾಡಿರುವ ಅನಿರುದ್ಧ, ಅಕ್ಷಯ್ ಖನ್ನಾ ಅವರು ಇತ್ತೀಚೆಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಅವರು 1 ಸಂದರ್ಶನದಲ್ಲಿ ಮಾತನಾಡಿದಾಗ, ನಾನು ಶಾರುಖ್ ಖಾನ್ ಆಗುವವರೆಗೂ ನಾನೋರ್ವ ಯಶಸ್ವಿ ಕಲಾವಿದ ಅಲ್ವಾ ಅಂತಾ ಪ್ರಶ್ನಿಸಿದ್ದರು. ಅದೇ ರೀತಿ ಅವರವರ ಖ್ಯಾತಿ, ಟ್ಯಾಲೆಂಟ್ ಅವರವರಿಗೆ ಸೇರಿದ್ದು, ಅದಕ್ಕೆ ಅವರು ತಕ್ಕವರಾಗಿರುತ್ತಾರೆ. ನನ್ನನ್ನು ಹಲವರು ಗುರುತಿಸುತ್ತಾರೆ. ನನಗೆ ಇನ್ನೇನು ಬೇಕು ಎಂದು ಕೇಳಿದ್ದಾರೆ ಅನಿರುದ್ಧ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




