ಕಾಂತಾರ ಸಿನಿಮಾದಲ್ಲಿ ನಟ ಶಿವನಿಗೆ ಜೈಲಿನಲ್ಲಿರುವಾಗ ತಾನು ಮರಣ ಹೊಂದಿದ ವಿಷಯ ತಿಳಿಸಲು ಅಳುತ್ತಾ ಕುಳಿತ ದೈವವನ್ನು ಕಂಡು ಬೆಚ್ಚಿಬಿದ್ದ ಶಿವ. ಜೈಲಿನಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ ಶಿವನ ಸ್ನೇಹಿತರು ಇದೆಲ್ಲವನ್ನು ನೀವು ಕಾಂತಾರ ಸಿನಿಮಾದಲ್ಲಿ ನೋಡಿರುತ್ತೀರಿ ಈ ಜೈಲಿರರುವುದು ಉಡುಪಿ ಜಿಲ್ಲೆಯ ಹೃದಯ ಭಾಗದಲ್ಲಿ.
ಇದೊಂದು ಸುಮಾರು 20 ದಶಕಗಳ ಹಳೆಯ ಕಟ್ಟಡವಾಗಿದ್ದು ಬ್ರಿಟೀಷರು ಈ ಕಟ್ಟಡವನ್ನು ಖೈದಿಗಳನ್ನು ಬಂಧಿಸಿ ಇಡಲು ಉಪಯೋಗಿಸುತಿದ್ದರು. ಈ ಜೈಲಿನಲ್ಲಿ ಸಾಕಷ್ಟು ಸ್ವಾತಂತ್ರ ಹೋರಾಟಗಾರನ್ನು ಬಂದಿಸಿದ್ದರು ಎನ್ನಲಾಗುತ್ತಿದೆ .
ಆದರೆ ಈಗ ಈ ಐತಿಹಾಸಿಕ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮ ಮಾಡಿ ನೂತನ ನಗರಸಭೆ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಕಟ್ಟಡದ ಗೋಡೆ ಕಿಟಕಿಗಖು ಗಟ್ಟಿಮುಟ್ಟಾಗಿರುವುದರಿಂದ ಕಲಾಸಕ್ತರು ಪ್ರತಿಭಟನೆಯ ಮೂಲಕ ಈ ಕಟ್ಟಡವನ್ನು ನೆಲಸಮ ಮಾಡದಂತೆ ತಡೆಯಲು ಮುಂದಾಗುತಿದ್ದಾರೆ.
ಈಗಾಗಲೇ ಜೈಲು ಮುಂದೆ ಕೂತು ಜೈಲಿನ ಕಟ್ಟಡದ ಪ್ರತೀ ಕೊಠಡಿ, ಗೋಡೆ ವಿನ್ಯಾಸ, ಕಬ್ಬಿಣದ ಸಲಾಕೆ ಹೀಗೆ ಅದೆಲ್ಲವನ್ನೂಮಾಡಿದ್ದಾರೆ.
ಕಲಾಸಕ್ತರ ಪ್ರತಿಭಟನೆ ಮಣಿದು ಜಿಲ್ಲಾಡಳಿತ ಕಟ್ಟಡ ಉಳಿಸುತ್ತಾ ಎಂದು ಕಾದುನೋಡಬೇಕಿದೆ.