Sandalwood: ಮಜಾ ಟಾಕೀಸ್ ಅನ್ನೋದು ಕನ್ನಡ ಮಾಧ್ಯಮ ರಂಗದಲ್ಲಿ ನಗುವಿನ ಅಲೆ ಹಬ್ಬಿಸಿದ ಶೋ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಮಜಾ ಟಾಕೀಸ್ ಶುರುವಾಗತ್ತೆ ಅಂತಾ ಹೇಳಿದ್ರೆ, ಕರ್ನಾಟಕದ ಮನೆ ಮಂದಿ ಎಲ್ಲ ರಿಮೋಟ್ ಹಿಡಿದು, ಟಿವಿ ಮುಂದೆ ಕುಳಿತುಕ“ಳ್ಳುತ್ತಿದ್ದರು. ಅಂಥ ಕಾಮಿಡಿ ಶೋ. ಆದರೆ ಆ ಕಾಮಿಡಿ ಶೋನಿಂದ ಸಡನ್ ಆಗಿ ವಿಶ್ವ ಅವರು ಆಚೆ ಬಂದರು. ಅದರ ಬಗ್ಗೆ ವಿಶ್ವಾ ಅವರೇ ಮಾತನಾಡಿದ್ದಾರೆ.
ವಿಶ್ವ ಅವರನ್ನು ಜನ ಹೆಚ್ಚು ಗುರುತಿಸುತ್ತ ಬಂದಿದ್ದು, ಇದೇ ಮಜಾ ಟಾಕೀಸ್ ನಿಂದ. ಇದರಲ್ಲಿ ವಿಶ್ವ ಮುತ್ತುಮಣಿ ರೋಲ್ ಪ್ಲೇ ಮಾಡ್ತಿದ್ರು. ಅವರಿಗೆ ಈ ರೋಲ್ ಸಿಕ್ಕಿದ್ದಾದರೂ ಹೇಗೆ ಅಂತಾ ಕೇಳಿದ್ರೆ, ಸೃಜನ್ ಮತ್ತು ವಿಶ್ವ ಉತ್ತಮ ಗೆಳೆಯರು. ಆದರೆ ಸಿನಿಮಾ ಪ್ರಮೋಷನ್‌ಗಾಗಿ ಎಸ್.ನಾರಾಯಣ್ ಅವರು ವಿಶ್ವ ಅವರನ್ನು ಮಜಾ ಟಾಕೀಸ್ ವೇದಿಕೆಗೆ ಕರೆದ“ಯ್ದಿದ್ದರು.
ಇದಾದ ಬಳಿಕ ವಿಶ್ವನಿಗೆ ಕಾಲ್ ಮಾಡಿದ ಸೃಜನ್ 1 ರೋಲ್ ಇದೆ ಪ್ಲೇ ಮಾಡ್ತೀಯಾ ಅಂತಾ ಕೇಳಿದ್ದರು. ಆಗ ವಿಶ್ವ, ಅಲ್ಲಿ ಮಂಡ್ಯ ರಮೇಶ್ ಅವರು ಇದ್ದಾರೆ, ಪವನ್ ಇದ್ದಾರೆ, ಮನು ಅಣ್ಣ ಇದ್ದಾರೆ, ದಯಾ ಅಣ್ಣ ಇದ್ದಾರೆ. ಶ್ವೇತಾ, ಅಪರ್ಣಾ, ಪಡೀಲ್ ಇದ್ದಾರೆ. ಇವರನ್ನೆಲ್ಲ ಬಿಟ್ಟು ಯಾವುದಾದರೂ ನ್ಯೂ ರೋಲ್ ಇದ್ರೆ ನಾನು ಮಾಡ್ತೀನಿ. ಇಲ್ಲವಾದಲ್ಲಿ ಅವರಲ್ಲಿ ನಾನು ಓರ್ವ ಆಗಿಬಿಡ್ತೀನಿ. ಆಗ ನಿಮಗೂ ನನ್ನನ್ನು ಸೇರಿಸಿಕ“ಂಡು ಪ್ರಯೋಜನವಾಗುವುದಿಲ್ಲ ಎಂದಿದ್ದರು. ಹಾಗಾಗಿ ಸೃಜನ್ ಓಕೆ ಹಾಗೆ ಮಾಡೋಣ ಎಂದಿದ್ದರು.
ಬಳಿಕ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಬರ್ತ್‌ಡೇ ಪಾರ್ಟಿಲಿ ಸಿಕ್ಕಾಗ, ಈ ಬಗ್ಗೆ ಮತ್ತೆ ಮಾತನಾಡಿದ್ದರಂತೆ. ಹಾಗಾಗಿ ಈ ವೇಳೆ ಏನಾಯಿತು ಎಂದು ತಿಳಿಯಲು ಸಂದರ್ಶನ ನೋಡಿ.