ಸಿನಿಮಾ ಸುದ್ದಿ :ಮೇಘನರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಪನ್ನಗ ಭರಣ , ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ನಿರ್ಮಿಸಿರುವ ಹಾಗೂ ವಿಶಾಲ್ ಆತ್ರೇಯ ನಿರ್ದೇಶನದ “ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಇತ್ತೀಚೆಗೆ Betel music youtube channal ಮೂಲಕ ಬಿಡುಗಡೆಯಾಗಿ, ಜನರ ಮನ ಗೆಲ್ಲುತ್ತಿದೆ.
ವಾಸುಕಿ ವೈಭವ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನರಾಜ್ ಹಾಗೂ ಮಹತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.ಜನಪ್ರಿಯವಾಗುತ್ತಿರುವ “ದೂರಿ ಲಾಲಿ” ಹಾಡನ್ನು ಹಾಡುತ್ತಾ(ತಾಯಿಯರು) ತಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಾ? ಎಂಬ ವಿಡಿಯೋವನ್ನು ನಿಮ್ಮ ಇನ್ಸ್ಟಾಗ್ರಾಮ್ ಮೂಲಕ ಈ ಕೆಳಕಂಡ @megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in ಇನ್ಸ್ಟಾಗ್ರಾಮ್ ಐಡಿಗಳಿಗೆ ಟ್ಯಾಗ್ ಮಾಡಬೇಕು.
ಈ ವಿಡಿಯೋಗಳಲ್ಲಿ ಮೂರು ವಿಡಿಯೋಗಳನ್ನು ಆಯ್ಕೆ ಮಾಡಲಾಗುವುದು. ಆ ಮೂವರು ತಮ್ಮ ಮಕ್ಕಳೊಂದಿಗೆ ಮೇಘನರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.
Raani movie: ಭಾರಿ ಮೊತ್ತಕ್ಕೆ ಮಾರಾಟವಾಯಿತು “ರಾನಿ” ಆಡಿಯೋ ರೈಟ್ಸ್ .