Sandalwood: ನಟ ರಘು ಅವರು ನಟನೆ ಮತ್ತು ನಿರ್ದೇಶಕನ ಎರಡನ್ನೂ ಮಾಡುತ್ತಿದ್ದರು. ಆದರೆ ಕೆಲ ಕಾಲ ಅವರು ನಟನೆ ಬಿಟ್ಟು ನಿರ್ದೇಶಕರಾಗಿಯೇ ಇದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರು ನಟನೆ, ನಿರ್ದೇಶನವನ್ನೂ ರಘು ಮಾಡಿದ್ದಾರೆ.
ಇನ್ನು ಎಲ್ಲಾ ಸಿನಿಮಾದಲ್ಲೂ ವಿಲನ್ ರೋಲ್ ಮಾಡುವ ರಘು ಬಂದಿದ್ದು ಕೂಡ ವಿಲನ್ ಕ್ಯಾರೆಕ್ಟರ್‌ಗಾಗಿ. ಅವರಿಗೆ ರಂಗಭೂಮಿಯಲ್ಲೂ, ಸಿನಿಮಾ, ಸಿರಿಯಲ್ ಎಲ್ಲದರಲ್ಲೂ ವಿಲನ್ ಪಾತ್ರವೇ ರಘು ಅವರಿಗೆ ಸಿಕ್ಕಿದ್ದು. ಆದರೆ ನಾನು ಎಲ್ಲ ಪಾತ್ರವನ್ನು ನಿರ್ವಹಿಸಲು ಇಷ್ಟಪಡುತ್ತೇನೆ ಅಂತಾರೆ ರಘು.
ಇನ್ನು ಸಿರಿಯಲ್- ಸಿನಿಮಾ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿರುವ ರಘು, ಟಿವಿಯಲ್ಲಿ ಬರುವ ಸಿರಿಯಲ್ ನೋಡುವವರು ಟಿವಿ ಆನ್ ಆಗಿದ್ದರೆ ನೋಡುತ್ತಾರೆ. ಆದರೆ ಸಿನಿಮಾ ಹಾಗಲ್ಲ. ಅಲ್ಲಿ ಜನ ನಿರೀಕ್ಷೆ ಇದ್ದು ಬರುತ್ತಾರೆ. ದುಡ್ಡು ನೀಡುತ್ತಾರೆ. ಹಾಗಾಗಿ ಸಿನಿಮಾದಲ್ಲಿ ಹೆಚ್ಚು ಡೆಡಿಕೇಶನ್ ಇರಬೇಕು ಅಂತಾರೆ ರಘು.
ಇನ್ನು ಸ್ನೇಹಿತರ ಬಗ್ಗೆ ಮಾತನಾಡಿರುವ ರಘು ನಾವು ಎಂಥವರ ಜತೆ ಸ್ನೇಹ ಮಾಡುತ್ತೇವೆ ಅನ್ನೋದು ಮುಖ್ಯ. ನಾವು ಎಂಥವರ ಜತೆ ಇರುತ್ತೇವೆ ಅನ್ನೋದು ಮುಖ್ಯ. ನಾವು ಅವರ ಜತೆ ಹೇಗಿರುತ್ತೇವೆ ಅನ್ನೋದು ಮುಖ್ಯ ಅಂತಾರೆ ರಘು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.