Sunday, September 8, 2024

Latest Posts

ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!

- Advertisement -

Film News:

ಮಲಯಾಳಂ ಸ್ಟಾರ್ ನಟ ಇದೀಗ ಸ್ಯಾಂಡಲ್ ವುಡ್ ನಲ್ಲಿ  ಸದ್ದು ಮಾಡುತ್ತಿದ್ದಾರೆ. ಪ್ರೇಮ್  ಹಂಚಿಕೊಂಡ  ಆ ಒಂದು ಪೋಟೋ ಸದ್ಯ ಸ್ಯಾಂಡಲ್  ವುಡ್ ಭಾರಿ  ಸದ್ದು ಮಾಡುತ್ತಿದೆ. ಆ ಸ್ಟಾರ್ ನಟನಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ರಾ ಈ  ಡೈರೆಕ್ಟರ್..?  ಹಾಗಿದ್ರೆ ಆ ಸ್ಟಾರ್ ನಟ ಯಾರು..? ಎಂಬ  ಪ್ರಶ್ನೆ  ಸಂಚಲನ ಮೂಡಿಸುತ್ತಿದೆ.

ಪೊಗರು ಚಿತ್ರದ ಬಳಿಕ ದ್ರುವ ಸರ್ಜಾ ಮತ್ತೊಂದು ಸಿನಿಮಾದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮಗುವಿನ ಆಗಮನದ ಖುಷಿಯಲ್ಲಿರುವ ದ್ರುವ ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಂತಸದ ವಿಚಾರ ನೀಡಿದ್ದಾರೆ.

ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಪೊಗರು ಮೂಲಕ ಹೇಳಿಕೊಳ್ಳುವಂಥ ಯಶಸ್ಸು ಕಾಣದ ಧ್ರುವ ಸರ್ಜಾ ಮುಂದಿನ ಚಿತ್ರಗಳಿಗಾಗಿ ಎಪಿ ಅರ್ಜುನ್ ಹಾಗೂ ಜೋಗಿ ಪ್ರೇಮ್ ಅವರ ಜೊತೆ ಕೈ ಜೋಡಿಸಿದ್ದಾರೆ. ಎರಡೂ ಚಿತ್ರಗಳ ಚಿತ್ರೀಕರಣ ಆರಂಭವಾಗಿದ್ದು ಎಪಿ ಅರ್ಜುನ್ ನಿರ್ದೇಶನದ ಚಿತ್ರಕ್ಕೆ ಮಾರ್ಟಿನ್ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಡಲಾಗಿಲ್ಲ.
ಸದ್ಯ ಚಿತ್ರದ ನಿರ್ದೇಶಕ ಪ್ರೇಮ್ ಕೂಡ ಇದೇ ಕೆಲಸದಲ್ಲಿ ನಿರತರಾಗಿದ್ದು, ಕಳೆದೆರಡು ವಾರಗಳಿಂದ ತಮ್ಮ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದ ಟೈಟಲ್ ಟೀಸರ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ಅನ್ನು ಇದೇ ತಿಂಗಳ 20ರಂದು ಸಂಜೆ 5 ಗಂಟೆಗೆ ಒರಾಯನ್ ಮಾಲ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಇದಾದ ಬೆನ್ನಲ್ಲೇ ಇದೀಗ ನಿರ್ದೇಶಕ ಜೋಗಿ ಪ್ರೇಮ್ ಮಲಯಾಳಂನ ಮೇರುನಟ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿರುವುದು ಕುತೂಹಲವನ್ನು ಕೆರಳಿಸಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಗಳಲ್ಲಿ ಮೋಹನ್ ಲಾಲ್ ಅವರನ್ನು ಭೇಟಿಯಾದ ಚಿತ್ರವನ್ನು ಹಂಚಿಕೊಂಡಿರುವ ಜೋಗಿ ಪ್ರೇಮ್ ಮೋಹನ್ ಲಾಲ್ ಅವರ ಸರಳತೆಗೆ ಮನಸೋತು ಬರವಣಿಗೆ ಮೂಲಕ ಹೊಗಳಿದ್ದಾರೆ. ನಿಮ್ಮ ಬೆಂಬಲ ನಾವು ಮತ್ತಷ್ಟು ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ ಎಂದು ಮೋಹನ್ ಲಾಲ್ ಅವರನ್ನು ಹೊಗಳಿ ಪ್ರೇಮ್ ಬರೆದುಕೊಂಡಿದ್ದಾರೆ.

ಹೀಗೆ ಜೋಗಿ ಪ್ರೇಮ್ ಹಂಚಿಕೊಂಡಿರುವ ಫೋಟೊ ನೋಡಿದ ನೆಟ್ಟಿಗರ ತಲೆಯಲ್ಲಿ ಕುತೂಹಲ ಕೆರಳಿದೆ. ಇದ್ದಕ್ಕಿದ್ದಂತೆ ಜೋಗಿ ಪ್ರೇಮ್ ಮೋಹನ್ ಲಾಲ್ ಅವರನ್ನು ಭೇಟಿಯಾಗಿರುವುದಾದರೂ ಏಕೆ, ಮೋಹನ್ ಲಾಲ್ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಅತಿಥಿ ಪಾತ್ರವನ್ನೇನಾದರೂ ನಿರ್ವಹಿಸಲಿದ್ದಾರಾ ಎಂಬ ಚರ್ಚೆಗಳು ಆರಂಭವಾಗಿವೆ.

ಮೋಹನ್ ಲಾಲ್ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬಹುದು ಎಂಬ ಊಹೆಗಳು ಹೆಚ್ಚಾಗಿವೆ. ಹೀಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕಾಗಿಯೇ ಪ್ರೇಮ್ ಮೋಹನ್ ಲಾಲ್ ಅವರನ್ನು ಭೇಟಿಯಾಗಿರಬಹುದು ಎಂಬ ಅಭಿಪ್ರಾಯಗಳು ಸದ್ಯ ಹೆಚ್ಚಾಗಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಮೋಹನ್ ಲಾಲ್ ಅವರ ಬಗ್ಗೆ ಬರೆದುಕೊಂಡಿರುವ ಪ್ರೇಮ್ ಅಂತಿಮವಾಗಿ ಟೈಟಲ್ ಟೀಸರ್ ಬಿಡುಗಡೆ ದಿನಾಂಕ, ಸಮಯ ಮತ್ತು ಸ್ಥಳವನ್ನು ಉಲ್ಲೇಖಿಸಿರುವುದು ಈ ಊಹೆ ಹೆಚ್ಚಾಗುವಂತೆ ಮಾಡಿದೆ.

ಹೊಂಬಾಳೆ ಫಿಲಂಸ್ ನಿರ್ಮಾಣದ “ಧೂಮಂ” ಆರಂಭ.. ಪವನ್ ಕುಮಾರ್ ಡೈರೆಕ್ಷನ್..

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..

ಶಶಾಂಕ್ ನಿರ್ದೇಶನದ ನೂತನ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ…

- Advertisement -

Latest Posts

Don't Miss