Sandalwood News: ನಟಿ ರಮೋಲಾ, ಇತ್ಚೀಚೆಗೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಮನೆ ಮಾತಾಗಿದ್ದರು. ಆದರೆ ಇದೀಗ ರಮೋಲಾ ವಿರುದ್ಧ ದೂರು ನೀಡಲಾಗಿದೆ. ಆಕೆ ನಟಿಸಿದ್ದ ರಿಚ್ಚಿ ಚಿತ್ರದ ಚಿತ್ರ ತಂಡವೇ ರಮೋಲಾ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.
ರಿಚ್ಚಿ ತಂಡ ಕರ್ನಾಟಕ ವಾಣಿಜ್ಯ ಮಂಡಳಿ ಬಳಿ ರಮೋಲಾ ವಿರುದ್ಧ ದೂರು ನೀಡಿದ್ದು, ಸಿನಿಮಾದಲ್ಲಿ ನಟಿಸುವಾಗ ಇದ್ದ ಆಸಕ್ತಿ, ಈಗಿಲ್ಲ. ಅವರಿಗಾಗಿ ನಾವು ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಈಗ ಸಿನಿಮಾ ಪ್ರಮೋಷನ್‌ಗೆ ಬನ್ನಿ ಎಂದರೆ ಬರುತ್ತಿಲ್ಲವೆಂದು ಆರೋಪಿಸಿದ್ದಾರೆ.
ಅಲ್ಲದೇ, ಕರೆ ಮಾಡಿದರೆ, ಕರೆಯನ್ನೂ ಸ್ವೀಕರಿಸುತ್ತಿಲ್ಲವೆಂದು ಆರೋಪಿಸಲಾಗಿದೆ. ರಿಚ್ಚಿ ಚಿತ್ರದ ನಿರ್ಮಾಪಕ ಹೇಮಂತ್ ರಿಚ್ಚಿ ದೂರು ನೀಡಿದ್ದು, ಸಿನಿಮಾ ಪ್ರಮೋಷನ್‌ಗೆ ಈ ಚಿತ್ರದಲ್ಲಿ ನಟಿಯಾಗಿ ನಟಿಸಿರುವ ರಮೋಲಾ ಸಹಕರಿಸುತ್ತಿಲ್ಲ, ಇವರ ವಿರುದ್ಧ ಕ್ರಮ ತೆಗೆದುಕ“ಳ್ಳಿ ಎಂದು ದೂರು ನೀಡಿದ್ದಾರೆ.
ರಮೋಲಾ ಕನ್ನಡತಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಅರ್ಧಕ್ಕೆ ಹೋದ ರಮೋಲಾ. ತಮಿಳಿನ ಧಾರಾವಾಹಿಗಳಲ್ಲಿ ಕಾಣಿಸಿಕ“ಂಡಿದ್ದರು. ಇತ್ತೀಚೆಗೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಬುಲೇಟ್ ಪ್ರಕಾಶ್ ಮಗ ರಕ್ಷಕ್ ಜೋಡಿಯಾಗಿ ಕಾಣಿಸಿಕ“ಂಡಿದ್ದರು.