Sandalwood News: ಇದೇ ಜುಲೈ 2ರಂದು ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬರ್ತ್‌ಡೇ ಇದೆ. ನೆಚ್ಚಿನ ಹಿರೋ ಬರ್ತ್‌ಡೇ ಅಂದ್ರೆ ಕೇಳ್ಬೇಕಾ..? ದೂರದೂರಿನಿಂದ ಅಭಿಮಾನಿಗಳು ನಟನ ಮನೆ ಮುಂದೆ ಬಂದು ನಿಂತು ವಿಶ್ ಮಾಡಲು ಕಾಯುತ್ತಿರುತ್ತಾರೆ. ಅವಕಾಶ ಸಿಕ್ಕರೆ, ಕೇಕ್ ಕತ್ತರಿಸಿ, ಸೆಲ್ಫಿ ತೆಗೆದುಕxಡು ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಯಾಕಂದ್ರೆ ತಾನು ಶೂಟಿಂಗ್ ಇರುವ ಕಾರಣಕ್ಕೆ ಬರ್ತ್‌ಡೇಯಂದು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಅಭಿಮಾನಿಗಳು ಮನೆಯ ಬಳಿ ಬರೋದು ಬೇಡ ಅಂತಾ ಗಣೇಶ್ ವಿನಂತಿಸಿದ್ದಾರೆ.
ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ಬಗ್ಗೆ ಬರೆದುಕ“ಂಡಿರುವ ಅವರು, ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಮತ್ತು ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕ“ಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ಪಿನಾಕ ಹಾಾಗೂ ಯುವರ್ ಸಿನ್ಸಿಯರ್ಲಿ ರಾಮ್ ಸಿನಿಮಾ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಬೇಕಿರುವ ಕಾರಣ, ಜುಲೈ 2ರಂದು ನಿಮ್ಮೆಲ್ಲರನ್ನೂ ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.
ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತ“ಂದಿಲ್ಲ. ಆದರ ಕಾರಣ ಯಾರೂ ಮನೆಯ ಬಳಿ ಬರದೇ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ, ಆಶೀರ್ವದಿಸಬೇಕೆಂದು, ಈ ಮೂಲಕ ವಿನಂತಿಸುತ್ತೇನೆ.