Sandalwood News: ಸದ್ಯ ರಾಮಾಚಾರಿ ಸಿರಿಯಲ್ ಮೂಲಕ ಮನೆ ಮಾತಾಗಿರುವ ರಿತ್ವಿಕ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾ ಪಯಣದ ಬಗ್ಗೆ ಮಾತನಾಡಿದ್ದಾರೆ.
ರಿತ್ವಿಕ್ ಕೃಪಾಕರ್ ಅವರ ತಂದೆ ಸ್ಯಾಂಡಲ್‌ವುಡ್‌ನ ನಿರ್ದೇಶಕರು. ಆದರೆ ರಿತ್ವಿಕ್ ಮಾತ್ರ ತಂದೆ ಹೆಸರು ಬಳಸಿ ಎಂದಿಗೂ ಮುಂದೆ ಬಂದವರಲ್ಲ. ಬದಲಾಗಿ ತಮ್ಮಲ್ಲಿರುವ ಕಲೆಯಿಂದಲೇ ಅವರು ಪ್ರಸಿದ್ಧರಾಗಿರೋದು. ಇದೀಗ ಯಾಕೆ ನೀವು ನಿಮ್ಮ ತಂದೆ ಹೆಸರು ಎಲ್ಲೂ ಹೇಳಲ್ಲ ಅಂತಾ ಕೇಳಿದಾಗ, ಅವರು ಉತ್ತರಿಸಿದ್ದೇನೆಂದರೆ, ಅಪ್ಪನ ಹೆಸರು ಎಲ್ಲಿಯೂ ಹೇಳಬಾರದು ಅಂತಲ್ಲ. ಬದಲಾಗಿ ನನ್ನಲ್ಲಿರುವ ಕಲೆಯಿಂದಲೇ ನಾನು ಮುಂದೆ ಬರಬೇಕು ಅಂತಾರೆ ರಿತ್ವಿಕ್.
ಅವರ ತಂದೆ ಕೂಡ ಅವರಿಗೆ ಹೇಳಿದ್ದರಂತೆ, ನೀನು ನನ್ನ ಮಗ ಅಂತಾ ಹೇಳಿದ್ರೆ, ಆಡಿಷನ್ ಇಲ್ಲದೆಯೇ, ನಿನ್ನನ್ನು ಸೆಲೆಕ್ಟ್ ಮಾಡ್ತಿದ್ರು ಅಂತಾ. ಆದರೆ ರಿತ್ವಿಕ್ ನನಗೆ ಆ ರೀತಿ ಸೆಲೆಕ್ಟ್ ಆಗೋದು ಇಷ್ಟವಿಲ್ಲ. ಬದಲಾಗಿ, ನನ್ನ ಟ್ಯಾಲೆಂಟ್ ನಿಂದಲೇ ನಾನು ಸೆಲೆಕ್ಟ್ ಆಗಬೇಕು ಎಂದಿದ್ದರಂತೆ.
ರಾಮಾಚಾರಿ ಆಡಿಷನ್ ನಡೆಯುವಾಗ ರಿತ್ವಿಕ್ ದಪ್ಪವಾಗಿದ್ರು. ಆಗ ನಿನಗೆ 3 ತಿಂಗಳು ಸಮಯ ನೀಡುತ್ತೇವೆ. ಅಷ್ಟರಲ್ಲಿ ಸಿಕ್ಸ್ ಪ್ಯಾಕ್ ಬಾಡಿ ಮಾಡಿರಬೇಕು ಎಂದಿದ್ದರಂತೆ. ಆಗ ರಿತ್ವಿಕ್ ಕಷ್ಟ ಪಟ್ಟು ಜಿಮ್‌ಗೆ ಹೋಗಿ ತೂಕ ಕರಗಿಸಿದ್ದರು. ಆದರೆ ಫೈನಲ್‌ನಲ್ಲಿ ಮೂವರು ಈ ಪಾತ್ರಕ್ಕೆ ಆಯ್ಕೆಯಾಗಿದ್ದರು. ಆಗ ಓರ್ವ ವ್ಯಕ್ತಿ ಐಟಿ ಕೆಲಸ ಬಿಡಬೇಕು ಎಂದು ಷರತ್ತು ಹಾಕಿದ್ದಕ್ಕೆ, ಕೆಲಸ ಬಿಡಲ್ಲವೆಂದು ಈ ಪಾತ್ರದಿಂದ ಆಚೆ ನಡೆದಿದ್ದರು. ಹಾಗಾಗಿ ರಿತ್ವಿಕ್ ರಾಮಾಚಾರಿ ಪಾತ್ರಕ್ಕೆ ಆಯ್ಕೆಯಾದರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

