- Advertisement -
Sandalwood News: ನಟ ಕಿಚ್ಚ ಸುದೀಪ್ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದು, ಮುಂಬರುವ ಸಿಸಿಎಲ್ ಆಟದ ಉದ್ಘಾಟನೆಗೆ ಆಮಂತ್ರಿಸಿದ್ದಾರೆ.
ಇದೇ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಸಿಸಿಎಲ್ ಸೀಸನ್ 11 ಆಂರಭವಾಗಲಿದೆ. ಈ ಕಾರ್ಯಕ್ರಮವನ್ನು ಡಿಸಿಎಂ ಡಿಕೆಶಿಯವರು ಉದ್ಘಾಟಿಸಬೇಕು ಎಂದು ಆಮಂತ್ರಿಸಲು ಕಿಚ್ಚ ಸುದೀಪ್ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಕಿಚ್ಚನಿಗೆ ನಿರ್ದೇಶಕ ಅನೂಪ್ ಭಂಡಾರಿ ಕೂಡ ಸಾಥ್ ನೀಡಿದ್ದರು. ಪಂದ್ಯ ಶುರುವಾದ ಮೊದಲ ದಿನವೇ ಕರ್ನಾಟಕ ಬುಲ್ಡೋಜರ್ ತಂಡ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವಾಡಲಿದೆ.
ಈ ಹಿಂದೆ ಸಿಸಿಎಲ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾಗ ಮಾತನಾಡಿದ ಸುದೀಪ್, ಬೇರೆ ಬೇರೆ ಭಾಷೆಯ ಸೆಲೆಬ್ರಿಟಿಗಳೊಂದಿಗೆ ಅಷ್ಟು ಒಡನಾಟವಿರಲಿಲ್ಲ. ಆದರೆ ಸಿಸಿಎಲ್ ಶುರುವಾದ ಬಳಿಕ, ಎಲ್ಲ ಭಾಷೆಯ ಚಿತ್ರರಂಗದವರನ್ನು ಭೇಟಿಯಾಗಲು ಇದು ಸೇತುವೆಯಂತೆ ಸಹಾಯ ಮಾಡಿದೆ ಎಂದಿದ್ದರು.
- Advertisement -