Sandalwood News: ನಾಳೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇನ್ ರೋಲ್‌ನಲ್ಲಿ ನಟಿಸಿದ್ದಾರೆ. ಆದರೆ ನಾಳೆ ಸಿನಿಮಾ ರಿಲೀಸ್ ಆಗತ್ತೋ, ಇಲ್ಲವೋ ಅನ್ನೋದೇ ಡೌಟ್. ಯಾಕಂದ್ರೆ ಮನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದು, ಎಸ್ಕೇಪ್ ಆಗಿದ್ದ ಮನುವನ್ನು ಪೋಲೀಸರು ಬಂಧಿಸಿ, ಹಾಸನದಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಆಗಿದ್ದೇನು..?
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಟಿ ಮತ್ತು ಮನು ಪರಿಚಯವಾಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದು 2022ರಲ್ಲಿ ಮನು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಶಿವಮಓಗ್ಗದ ಶಿಕಾರಿ ಪುರದಲ್ಲಿ ಕಾರ್ಯಕ್ರಮವಿದ್ದ ವೇಳೆ ಅಲ್ಲಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಎರಡೆರಡು ಬಾರಿ ಅತ್ಯಾಚಾರ ಮಾಡಿದ್ದಲ್ಲದೇ, ಫೋರ್ಸ್‌ಫುಲ್ಲಿ ತಾಳಿಯೂ ಕಟ್ಟಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಇಷ್ಟೇ ಅಲ್ಲದೇ, ತಾನು ಈಕೆಗೆ ಎಂದಿಗೂ ಮೋಸ ಮಾಡುವುದಿಲ್ಲ. ಜೀವನಪೂರ್ತಿ ಚೆನ್ನಾಗಿ ನೋಡಿಕೋಳ್ಳುತ್ತೇನೆ ಎಂದು ಮನು ವೀಡಿಯೋ ಮೂಲಕ ಹೇಳಿದ್ದು, ಇದನ್ನು ಸಂತ್ರಸ್ತೆ ರೆಕಾರ್ಡ್ ಮಾಡಿಕೋಂಡಿದ್ದಳು. ಇದೀಗ ಮಾಧ್ಯಮಗಳಿಗೆ ಇದೇ ವೀಡಿಯೋ ಮೂಲಕ ಸಂತ್ರಸ್ತೆ ಸಾಕ್ಷಿ ನೀಡಿದ್ದಾಳೆ.
ಆದರೆ ಈ ಬಗ್ಗೆ ಲೈವ್ ಬಂದು ಮಾತನಾಡಿರುವ ಮನು, ನಾಳೆ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ಅದನ್ನು ನೋಡಿ ತಡೆದುಕ“ಳ್ಳಲು ಆಗುತ್ತಿಲ್ಲ. ಹಾಗಾಗಿ ನನ್ನ ಮೇಲೆ ಕೆಟ್ ದಾಗಿ ಆರೋಪ ಮಾಡುತ್ತಿದ್ದಾರೆ. ಎಲ್ಲರೂ ಸಾಕ್ಷಿ ಸಮೇತ ಪ್ರೂವ್ ಮಾಡುತ್ತೇನೆ ಎಂದು ಹೇಳಿದ್ದ. ಇದಾದ ಕೆಲ ಸಮಯದಲ್ಲೇ ಪೋಲೀಸರು ಮನುನನ್ನು ಬಂಧಿಸಿದ್ದಾರೆ.
ಮನುವಿಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಇವರ ಫ್ಯಾಮಿಲಿ ಕಾಮಿಡಿ ಕಿಲಾಡಿ ರಿಯಾಲಿಟಿ ಶೋನಲ್ಲೂ ಬಂದಿತ್ತು. ಮನು ಕಾಮಿಡಿ ಕಿಲಾಡಿ ವಿನ್ನರ್ ಕೂಡ ಆಗಿದ್ದರು.