Sandalwood News: ಕಾಂತಾರ ಚಾಪ್ಟರ್ 1 ರಿಲೀಸ್ ಆಗಿ, ತನ್ನ ಅಶ್ವವೇಗ ಮುಂದುವರೆಸಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟೆಂಪಲ್ ರನ್ ಮುಂದುವರಿಸಿದ್ದಾರೆ.
ಕೆಲ ದಿನಗಳ ಹಿಂದೆ ರಿಷಬ್ ಮೈಸೂರು ಚಾಮುಂಡಿ ದರ್ಶನ ಮಾಡಿದ್ದರು. ಇದೀಗ ರಿಷಬ್ ವಾರಣಾಸಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದಿದ್ದಾರೆ.
ಇಷ್ಟು ದಿನ ಪ್ರಮೋಷನ್, ಸಂದರ್ಶನ ಅಂತಾ ಓಡಾಡುತ್ತಿದ್ದರು. ಇದೀಗ ಎಲ್ಲದರಿಂದ ಬ್ರೇಕ್ ಪಡೆದು, ಕಾಶಿ ವಿಶ್ವನಾಥನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ. ಕಾಶಿಯಲ್ಲಿ ನಡೆಯುವ ಗಂಗಾರತಿಯಲ್ಲಿ ಭಾಗವಹಿಸಿ, ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಈಗಾಗಲೇ ಕಾಂತಾರ ಭಾಗ 1 ರಿಲೀಸ್ ಆಗಿ ಬರೀ 2 ವಾರ ದಾಟಿದೆ. ಆದರೆ ಈಗಾಗಲೇ 700 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಲು ಸಿದ್ಧವಾಗಿದೆ. ಸಿನಿಮಾದ ನಿರ್ದೇಶನ ಮಾಡಿರುವ ರಿಷಬ್ ಬೆರ್ಮೆ ಪಾತ್ರದಲ್ಲಿ ಮಿಂಚಿದ್ದು, ಕನಕವತಿಯಾಗಿ ರುಕ್ಮಿಣಿ ವಸಂತ ಬಣ್ಣ ಹಚ್ಚಿದ್ದಾರೆ. ಇನ್ನು ರಾಜಶೇಖರನಾಗಿ ಮಲೆಯಾಳಿ ನಟ ಜಯರಾಾಮ್ ನಟಿಸಿದರೆ, ಕುಲಶೇಖರನಾಗಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ.