Sandalwood News: ನಟ ಕಿಚ್ಚ ಸುದೀಪ್ ತಮ್ಮ ಬರ್ತ್‌ಡೇಯನ್ನು ಈ ಬಾರಿ ಫ್ಯಾನ್ಸ್ ಜತೆ ಆಚರಿಸಲು ರೆಡಿಯಾಗಿದ್ದಾರೆ. ಅಮ್ಮ ತೀರಿಹೋಗಿ 1 ವರ್ಷವೂ ಕಳೆದಿಲ್ಲ. ಹಾಗಾಗಿ ಈ ಬಾರಿ ಕಿಚ್ಚನಿಗೆ ಬರ್ತ್‌ಡೇ ಮಾಡುವ ಖುಷಿ ಕಡಿಮೆ. ಆದರೆ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ, ಕಿಚ್ಚ ತಾವೇ ಸಮಯ ಮತ್ತು ಸ್ಥಳ ನಿಗದಿ ಮಾಡಿ, ಅಲ್ಲೇ ತಮ್ಮ ಬರ್ತ್‌ಡೇ ಸೆಲೆಬ್ರೇಟ್ ಮಾಡೋಣ ಎಂದಿದ್ದಾರೆ.
ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ರಾತ್ರಿ 9ಗಂಟೆಯಿಂದ 12 ಗಂಟೆವರೆಗೂ ಕಿಚ್ಚ ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಲಿದ್ದಾರೆ. ಹಾಗಾಗಿ ಮರುದಿನ ಮನೆಯ ಬಳಿ ಬಂದು ವಿಶ್ ಮಾಡೋದು ಬೇಡಾ ಅಂತಾ ಕಿಚ್ಚ ಮನವಿ ಮಾಡಿದ್ದಾರೆ.
ಆದರೆ ಮರುದಿನ ಯಾರೂ ತಮ್ಮ ಮನೆಯ ಬಳಿ ಯಾರೂ ಬರಬಾರದು. ಏಕೆಂದರೆ, ಅಂದು ನಾನು ಮನೆಯಲ್ಲಿ ಇರುವುದಿಲ್ಲ. ಅಮ್ಮ ಇಲ್ಲದ ವರ್ಷವಾಗಿರುವ ಕಾರಣ, ಮನೆಯ ಬಳಿ ಶಾಂತವಾತಾವರಣವಿರಲಿ ಎಂದು ಬಯಸಿದ್ದೇನೆ. ನಾನಿಲ್ಲವೆಂದು ತಿಳಿದಿದ್ದರೂ ನೀವು ಮನೆಯ ಬಳಿ ಬಂದರೆ ನನಗೆ ಬೇಸರವಾಗುತ್ತದೆ ಎಂದು ಹೇಳಿದ್ದರು.
ಇದೀಗ ಸಮಯ ಮತ್ತು ಸ್ಥಳ ನಿಗದಿಯಾಗಿದ್ದು, ಸೆ.1 ರ ರಾತ್ರಿ 9 ಗಂಟೆಗೆ ಕಿಚ್ಚನ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಬೇಕು ಎನ್ನುವ ಅವರ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್‌ಗೆ ಬರಬಹುದು.