Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಕೋರೋನಾ ಸಮಯದಲ್ಲಿ ಆದ ಅನುಭವದ ಬಗ್ಗೆ ಹೇಳಿದ್ದಾರೆ. ಅವಕಾಶ ಸಿಗದೇ, ಎಷ್ಟು ಕಷ್ಟವಾಯಿತು ಅಂತಾ ನೆನೆಸಿಕ“ಂಡಿದ್ದಾರೆ.
ಎಲ್ಲರ ಕಲಾಪಯಣದಲ್ಲೂ ಯಾಕಾದ್ರೂ ಇಂಡಸ್ಟ್ರಿಗೆ ಬಂದನಪ್ಪಾ ಅನ್ನೋ ರೀತಿಯ ಅನುಭವ ಆಗಿರುತ್ತದೆ. ಅದೇ ರೀತಿ ಧ್ರುವ ಅವರಿಗೂ ಕೂಡ ಈ ಅನುಭವ ಆಗಿತ್ತಂತೆ. ಕೋರೋನಾ ಸಮಯದಲ್ಲಿ 2 ವರ್ಷ ಅವಕಾಶವೇ ಸಿಗದೇ ಧ್ರುವ ಕಷ್ಟಪಟ್ಟಿದ್ದರಂತೆ. ಕೋರೋನಾ ಬರುವುದಕ್ಕೂ ಮುನ್ನ 15 ದಿನ ಗೆಸ್ಟ್ ರೋಲ್ ಮಾಡಿ, ಅದರಿಂದ ಚೆನ್ನಾಗಿ ದುಡ್ಡು ಮಾಡಿದ್ದರು. ಇನ್ನೇನು ಅದೃಷ್ಟ ಬಂದೇಬಿಡ್ತು ಅಂತಿದ್ದಾಗ, ವಕ್ಕರಿಸಿದ್ದ ಕೋರೋನಾ, ಕಲಾವಿದರ ಬಾಳನ್ನೇ ಕಷ್ಟವಾಗಿಸಿಬಿಡ್ತು. ಅದೇ ರೀತಿ ಅವಕಾಶ ಸಿಗದೇ, ಅದೇ ಹಣದಲ್ಲೇ ಧ್ರುವ 2 ವರ್ಷ ಕಳೆಯಬೇಕಾಯ್ತು.
ಆ ಸಮಯದಲ್ಲಿ ಸಿನಿಜರ್ನಿ ಸಾಕು ಅಂತಾ ಅನ್ನಿಸಿದ್ದು ನಿಜ. ಅಲ್ಲದೇ ಇಂಡಸ್ಟ್ರಿಯಲ್ಲಿ ಇದ್ದರೂ, ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡುವಾ ಅಂತಾ ಅನ್ನಿಸಿತ್ತಂತೆ ರಾಜೇಶ್ ಧ್ರುವ ಅವರಿಗೆ. ಬಳಿಕ ಡಿಡಿ1ನಲ್ಲಿ ಮ್ಯಾಪ್ ಆಫ್ ಮಿನಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತು. ಈ ಶೋ ಶೂಟಿಂಗ್ ನಡೆಯುವಾಗ, ಅಲ್ಲೇ ಸಮೀಪದಲ್ಲಿ ಯುವರತ್ನ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅಲ್ಲೇ ನಾನು ಅಪ್ಪು ಸರ್ ಅವರನ್ನು 1ಸ್ಟ್ ಮತ್ತು ಲಾಸ್ಟ್ ನೋಡಿ, ಹಾಯ್ ಮಾಡಿದ್ದು ಅಲ್ಲೇ ಎಂದು ನೆನೆಸಿಕ“ಂಡಿದ್ದಾರೆ ರಾಜೇಶ್ ಧ್ರುವ.
ಬಳಿಕ ಅಣ್ಣ-ತಂಗಿ ಸಿರಿಯಲ್‌ನಲ್ಲಿ ಕೆಲಸ ಮಾಡಿ, ಮತ್ತೆ ಕೆಳ ಸ್ಯಾಲರಿಗೆ ಹೋಗಿದ್ದೆ. ಆಗ ನನ್ನ ತಾಯಿ ಯಾಕೆ ನನಗೆ ವಿದ್ಯಾಭ್ಯಾಸ ಮುಂದುವರಿಸು ಎಂದು ಹೇಳ್ತಿದ್ರು ಅನ್ನೋದು ನನ್ನ ಗಮನಕ್ಕೆ ಬಂದಿತ್ತು. ಅದಾದ ಬಳಿಕ ಮತ್ತೆ ಕೆಲ ಅವಕಾಶ ಸಿಕ್ಕಿ, ಧ್ರುವ ಮತ್ತೆ ಸಿನಿಜರ್ನಿ ಮುಂದುವರಿಸಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




