Sandalwood: ಬಿಗ್ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ಬಾಸ್ ಆಟದ ಬಗ್ಗೆ, ಅನುಭವದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ನಾನು ಬಿಗ್ಬಾಸ್ ಫಿನಾಲೆ ದಿನ ಸಿಕ್ಕಾಪಟ್ಟೆ ಹೆದರಿಕೆಯಿಂದ ಇದ್ದೆ. ನಾವು ಎಷ್ಟೇ ಮಾತನಾಡಬಹುದು. ಏನೇ ಹೇಳಬಹುದು. ಧೈರ್ಯವಾಗಿ ಇರುವಂತೆ ಕಾಣಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಆ 1 ಹೆದರಿಕೆ ಇದ್ದೇ ಇರುತ್ತದೆ ಎಂದಿದ್ದಾರೆ ರೂಪೇಶ್ ರಾಜಣ್ಣ.
ಇನ್ನು ಬಿಗ್ಬಾಸ್ನ್ನು ಯಾರೂ ಬೈಯ್ಯಬೇಡಿ. ಬಿಗ್ಬಾಸ್ನಿಂದಲೇ ಹಲವರು ಪ್ರಸಿದ್ಧರಾಗಿದ್ದಾರೆ. ತಮ್ಮ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಜನ ನನ್ನನ್ನು ಗುರುತಿಸಿ ಮಾತನಾಡುತ್ತಾರೆ. ಬಿಗ್ಬಾಸ್ ಬಗ್ಗೆ ಹೇಳುತ್ತಾರೆ. ಆಗ ನನಗೆ ಖುಷಿಯಾಗುತ್ತದೆ. ಅಲ್ಲದೇ ಬಿಗ್ಬಾಸ್ ನನಗೆ ಆರೋಗ್ಯ ನೀಡಿದೆ. ಬಿಗ್ಬಾಸ್ನಲ್ಲಿ ಇದ್ದಾಗ ನೂರು ಕೆಜಿಗೂ ಅಧಿಕ ತೂಕವಿತ್ತು. ಆದರೆ ಈಗ ತೂಕ ಕಡಿಮೆಯಾಗಿ, ಆರೋಗ್ಯವಾಗಿದ್ದೇನೆ ಅಂತಾರೆ ರೂಪೇಶ್ ರಾಜಣ್ಣ.
ನಾನು ನೂರಕ್ಕೆ ನೂರು ಬಿಗ್ಬಾಸ್ ಗೆ ನೀಡುತ್ತೇನೆ. ಸುದೀಪ್ ಸರ್ ವಿಕೇಂಡ್ನಲ್ಲಿ ಬಂದು ಆ ಶೋವನ್ನೂ ಇನ್ನು ಚೆಂದಗಾಣಿಸುತ್ತಾರೆ. ಬಿಗ್ಬಾಸ್ ಅದ್ಭುತವಾದ ಶೋವಾಗಿದ್ದು, ಹಲವರ ಜೀವನದಲ್ಲಿ ಬೆಳಕಾಗಿದೆ ಅಂತಾರೆ ರೂಪೇಶ್ ರಾಜಣ್ಣ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




