Sandalwood: ನಟ, ಬಾಡಿ ಬಿಲ್ಡರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಮತ್ತು ರಘು ಇಬ್ಬರೂ 1 ಕ್ಲಾಸ್, ಬೆಂಚ್ ನಲ್ಲಿ ಕುಳಿತು 3 ವರ್ಷ ಓದಿದ್ದಾರೆ. 1 ಕಾಲೇಜ್‌ನಲ್ಲಿ ಓದಿದ್ದಾರೆ. ಈ ಬಗ್ಗೆ ರಘು ಮಾತನಾಡಿದ್ದಾರೆ.
ರಿಷಬ್-ರಘು ಹತ್ತಿರದ ಊರಿನವರು. ಅಲ್ಲದೇ ಇಬ್ಬರೂ ಫಿಟ್‌ನೆಸ್ ಫ್ರೀಕ್. ಅಲ್ಲದೇ ಇಬ್ಬರಿಗೂ ಕಲೆ ಇಷ್ಟ. ಹಾಗಾಗಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ರಿಷಬ್ ಅವರನ್ನು ಕಂಡಾಗ ಎಲ್ಲರೂ ವಾವ್ ಎನ್ನುತ್ತಾರೆ. ಇದು ನನಗೆ ಏನೂ ಅನ್ನಿಸುತ್ತಿಲ್ಲ. ಏಕೆಂದರೆ, ನನಗೆ ಅಂದೇ ರಿಷಬ್ ಎಂಥ ಟ್ಯಾಲೆಂಟ್ ವ್ಯಕ್ತಿ ಅಂತಾ ತಿಳಿದಿತ್ತು. ಅಂದೇ ನನಗೆ ಮುಂದೆ 1 ದಿನ ಈತ ಪ್ರಸಿದ್ಧನಾಗುತ್ತಾನೆ ಅಂತಾ ತಿಳಿದಿತ್ತು ಅಂತಾರೆ ರಘು.
ಆದರೆ ರಿಷಬ್ ಬೆಲ್‌ಬಾಟಮ್ ಸಿನಿಮಾ ಬರುವ ತನಕ ಪ್ರಸಿದ್ಧನಾಗಿರಲಿಲ್ಲ. ಅಲ್ಲಿಯವರೆಗೂ ರಿಷಬ್ ಯಾಕೆ ನಟನೆಗೆ ಬರುತ್ತಿಲ್ಲ ಅಂತಾ ಅನ್ನಿಸಿತ್ತು. ಆದರೆ ಬೆಲ್‌ಬಾಟಮ್ ಬಂದಾಗ ನನಗೆ ಸಮಾಧಾನ ಆಗಲಿಲ್ಲ. ಏಕೆಂದರೆ ರಿಷಬ್ ರೇಂಜಿನ್ ನಟನೆ ಅದಾಗಿರಿಲ್ಲ. ಆದರೆ ಕಾಂತಾರ ಬಂದಾಗ ಇದು ರಿಷಬ್ ಎನ್ನಿಸಿತ್ತು ಅಂತಾರೆ ರಘು.
ರಿಷಬ್ ಮತ್ತು ತಮ್ಮ ಕಾಲೇಜು ದಿನ ಹೇಗಿತ್ತು ಅಂತಾ ಹೇಳಿದ್ದಾರೆ. ಅಲ್ಲದೇ ಅವರು ಕಾಲೇಜ್ ಬಂಕ್ ಮಾಡಿದಾಗ ಏನು ಮಾಡ್ತಿದ್ರು, ಪರೀಕ್ಷೆ ಬರೆಯುವಾಗ ಏನ್ ಮಾಡ್ತಿದ್ರು..? ಹೀಗೆ ಹಲವು ಫನ್ನಿ ಘಟನೆ ಬಗ್ಗೆ ರಘು ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




