ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿದೆ. ಬಾಲ್ಯದ ಗೆಳೆಯ ಅಕ್ಷಯ್ ನೊಂದಿಗೆ ನಿಹಾರಿಕ ಡಿಸೆಂಬರ್ 28ರಂದು ಹೊಸ ಬಾಳಿಗೆ ಹೆಜ್ಜೆ ಹಾಕಿದ್ದರು. ಸರಳವಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಎರಡು ಕುಟುಂಬದವರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾ ಹಾರೈಸಿದ್ದರು.
ಹೀಗಾಗಿ ಮಗಳ ಆರತಕ್ಷತೆಯನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿರೋ ರಮೇಶ್ ಅರವಿಂದ್ ಸಿನಿಮಾ ತಾರೆಯರು ಹಾಗೂ ರಾಜಕೀಯ ನಾಯಕರಿಗೆ ಆಮಂತ್ರಣ ನೀಡಿದ್ದರು. ರಮೇಶ್ ಅರವಿಂದ್ ಆಮಂತ್ರಣದಂತೆ ಇಡೀ ಚಂದನವನದ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು, ಬೇರೆ-ಬೇರೆ ಕ್ಷೇತ್ರದ ಗಣ್ಯರು ಆರತಕ್ಷತೆಯಲ್ಲಿ ಭಾಗಿಯಾಗಿ ನಿಹಾರಿಕಾ ಮತ್ತು ಅಕ್ಷಯ್ ಗೆ ಶುಭ ಕೋರಿದ್ದಾರೆ. ಸುಮಲತಾ ಅಂಬರೀಶ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಪುನೀತ್ ಸುದೀಪ್, ಯಶ್, ಶ್ರೀಮುರಳಿ, ಪ್ರಜ್ವಲ್ ದೇವರಾಜ್, ಹರ್ಷಿಕಾ ಪೂಣಚ್ಚ, ಅಮೂಲ್ಯ, ಶಿಲ್ಪಾ ಗಣೇಶ್ ಸೇರಿದಂತೆ, ಸಚಿವ ಆರ್.ಅಶೋಕ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ರು. ಈ ವೇಳೆ ನಿಹಾರಿಕಾ ಮತ್ತು ಅಕ್ಷಯ್ ಜೊತೆ ಸುದೀಪ್ ಮತ್ತು ಯಶ್ ಸೇರಿದಂತೆ ಅನೇಕ ಸ್ಟಾರ್ಸ್ ಸಖತ್ ಸ್ಟೆಪ್ಸ್ ಹಾಕಿ ಮಸ್ತ್ ಎಂಜಾಯ್ ಮಾಡಿದರು.