Sandalwood: ನಗು ಮುಖದ ಹಿಂದಿನ ನೋವು! ಬಂದ್ರೆ ಬೆಟ್ಟ ಹೋದ್ರೆ ಟಾಟಾ! Vishwa Comedy Actor Podcast

Sandalwood: ತರಂಗ ವಿಶ್ವ ಅವರು ಬರೀ ನಟನೆಗೆ ಮಾತ್ರ ಸೀಮಿತರಾಗದೇ, ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಅವರು ಸಿನಿಮಾ ಮಾಡುವಾಗ ಅವರಿಗಾದ ಸಮಸ್ಯೆಗಳೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ.

ವಿಶ್ವ ಅವರು ಸಿನಿಮಾ ನಿರ್ಮಾಣ ಮಾಡುವುದು, 500 ಮನೆ ನಿರ್ಮಿಸುವುದಕ್ಕೆ ಸಮ ಅಂತಾರೆ. ಕೆಲವರ ಮನಸ್ಥಿತಿ ಕೆಲವು ರೀತಿ ಇರುತ್ತದೆ. ಕೆಲವರು ತಮ್ಮ ಗೆಲುವಿಗಾಗಿ ಬೇರೆಯವರನ್ನು ತುಳಿಯುವ ಮನಸ್ಥಿತಿಯವರಿರುತ್ತಾರೆ. ಅಂಥ ಮನಸ್ಥಿತಿಯವರು ನನ್ನ ಜೀವನದಲ್ಲೂ ಬಂದಿದ್ದರು. ನಾನು ಯಾರ ಬಳಿಯಾದರೂ, ಸಿನಿಮಾ ಮಾಡಲು ಫೈನಾನ್ಸ್ ತರಲು ಹೋದರೆ, ಅವರ ಬಳಿ ಹೋಗಿ, ಪಿನ್ ಇಟ್ಟು ನನಗೆ ಫೈನಾನ್ಸ್ ಸಿಗದ ಹಾಗೆ ಮಾಡೋದು. ಹೀಗೆಲ್ಲ ಮಾಡಿದ್ದರು ಅಂತಾ ವಿಶ್ವ ಹೇಳಿದ್ದಾರೆ.

ಇದಾದ ಬಳಿಕ ಕೋರೋನಾ ಬಂದು ಲಾಕ್‌ಡೌನ್ ಆಯಿತು. ಆಗಲೂ ನನಗೆ ಕೆಲವರು ಫೈನಾನ್ಸ್ ನೀಡಿದ್ದಾರೆ. ಹಾಗೆ ನೀಡಲು ಕಾರಣ ನಾನು ಅಷ್ಟು ನಿಯತ್ತಾಗಿರುವುದು. ಆದರೆ ಸಿನಿಮಾದಿಂದ ಗಳಿಸಿದ್ದಕ್ಕಿಂತ, ಕಳೆದುಕ“ಂಡಿದ್ದೇ ಹೆಚ್ಚು ಅಂತಾರೆ ವಿಶ್ವ. ಇನ್ನು ಸಿನಿಮಾ ಬಗ್ಗೆ ಕಾಳಜಿ ಇರುವವರು, ಪ್ರೀತಿ ಇರುವವರು, ದುಡ್ಡಿಗೆ ಆಸೆ ಪಡದೇ, ಸಿನಿಮಾ ನಿರ್ಮಾಣ ಮಾಡಬಯಸುವವರು ನನ್ನನ್ನು ಸಂಪರ್ಕಿಸಿ ಎಂದು ವಿಶ್ವ ಹೇಳಿದ್ದಾರೆ. ಹಾಗಾಗಿ ಸಿನಿಮಾ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇವರನ್ನು ಸಂಪರ್ಕಿಸಬಹುದು. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

About The Author