Sandalwood: ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟ ಧ್ರುವ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪೇಮೆಂಟ್ ಬಗ್ಗೆಯೂ ವಿವರಿಸಿದ್ದಾರೆ.
ನಾನು ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಕೆಲಸ ಮಾಡುವಾಗ, ನನ್ನ 1ಸ್ಟ್ ಸ್ಯಾಲರಿ 1 ಸಾವಿರದ 500 ರೂಪಾಯಿ ಇತ್ತು. ತಿಂಗಳಿಗೆ ಕೇವಲ 5ರಿಂದ 6 ದಿನ ಶೂಟಿಂಗ್‌ಗೆ ಅವಕಾಶವಿತ್ತು. ಅಷ್ಟೇ ಪಾತ್ರ ನೀಡುತ್ತಿದ್ದರು ಎಂದು ಧ್ರುವ ತಮ್ಮ ಸಂಬಳವನ್ನು ನೆನೆಸಿಕ“ಂಡಿದ್ದಾರೆ. ಅಲ್ಲದೇ ಈಗ ಈತ್ತೀಚೆಗೆ ಬಂದವರೂ ಕೂಡ ಡಬಲ್ ಡಿಜಿಟ್ ಪೇಮೆಂಟ್ ತೆಗೆದುಕ“ಳ್ಳುತ್ತಾರೆ ಎಂದು ಹೇಳುತ್ತಾರೆ ಧ್ರುವ.
ಅಲ್ಲದೇ ಸಿರಿಯಲ್‌ನಲ್ಲಿ ಹಾಕುವ ಉಡುಪನ್ನು ನಾವೇ ತರಬೇಕು ಅಂದ್ರೆ, ಅವರು ನೀಡುವ ಸಂಬಳವೆಲ್ಲ ಅದಕ್ಕೇ ಹೋಗುತ್ತದೆ. ಅಲ್ಲದೇ, ಶೂಟಿಂಗ್ ಡೇಟ್ ಸಿಗೋದು ತುಂಬಾ ಅಪರೂಪವಾಗಿದ್ದರೆ, ಈ ಬೆಂಗಳೂರಿನಲ್ಲಿ ಕಲಾವಿದರು ಜೀವನ ಸಾಗಿಸೋದಾದರೂ ಹೇಗೆ ಅಂತಾ ಕೇಳ್ತಾರೆ ಧ್ರುವ. ಅವರ ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




