Sandalwood: ನಟ ರಾಜವರ್ಧನ್ ಅವರು ಕರ್ನಾಟಕ ಟವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ಕೆಫೆ ಶುರು ಮಾಡಿ ಬದುಕು ಸಾಗಿಸಬೇಕು ಎಂದುಕ“ಂಡಿದ್ದ ರಾಜವರ್ಧನ್ ಸಿನಿಮಾ ಕಡೆ ಮತ್ತೆ ಬಂದಿದ್ದೇಕೆ ಅಂತಾ ವಿವರಿಸಿದ್ದಾರೆ.
ರಾಾಜವರ್ಧನ್ ಬಿಚ್ಚುಗತ್ತಿ ಸಿನಿಮಾದಲ್ಲಿ ನಟಿಸುವ ಮುನ್ನ ತಮ್ಮದೇ ಆಗಿರುವ ಕೆಫೆ ನಿರ್ಮಿಸಲು ಹೋಗಿದ್ದರು. ತಂದೆ ಡಿಂಗ್ರಿ ನಾಗರಾಜ್ ನಟರಾಗಿದ್ದರೂ ಕೂಡ, ತಮ್ಮ ಮಗ ಸ್ಯಾಂಡಲ್‌ವುಡ್‌ಗೆ ಬರಲಿ ಎನ್ನುವ ಆಸೆ ಅವರಿಗಿರಲಿಲ್ಲ. ಏಕೆಂದರೆ, ತಾನು ಆ ಸಮಯದಲ್ಲಿ ಪಟ್ಟ ಕಷ್ಟ ತನ್ನ ಮಗ ಪಡುವುದು ಬೇಡ ಎಂದು. ಆದರೆ ಸಮಯ ರಾಜ್ ಅವರನ್ನು ಕೂಡ ಸಿನಿಮಾ ಕ್ಷೇತ್ರಕ್ಕೆ ಕರೆತರುವ ನಿರ್ಧಾರ ಮಾಡಿಯಾಗಿತ್ತು.
1 ದಿನ ರಾಜ್ ಮನೆಯ ಬಳಿಯೇ ಇರುವ ನೆರೆಮನೆಯವರಾದ ತರುಣ್ ಸುಧೀರ್ ಅವರು ರಾಜ್ ಅವರನ್ನು ಮಾತುಕತೆಗೆ ಕರೆದಿದ್ದರು. ನಿನ್ನಲಿರುವ ಟ್ಯಾಲೆಂಟ್‌ನ್ನು ನೀನು ಬಳಸಿಕ“ಂಡು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಬಹುದು. ನಿನಗೆ ಆ ಯೋಗ್ಯತೆ ಇದೆ ಎಂದು ಹೇಳಿದ್ದರು. ಅವರ ಮಾತನ್ನು ಕೇಳಿದ ಬಳಿಕ, ರಾಜ್ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ಬಳಿಕ ಅವರಿಗೆ ಬಿಚ್ಚುಗತ್ತಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.