Sandalwood: ಈ ಸಿನಿಮಾ ಓಡಲ್ಲ, ಗ್ರಾಮರ್ ಇಲ್ಲ ಬರೀ ಗ್ಲಾಮರ್ ಬಂಗಾರದ ಮನುಷ್ಯ!: Duniya Vijay Podcast

Sandalwood: ಇತ್ತೀಚಿನ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅರ್ಥವೇ ಇಲ್ಲ. ಈ ವಿಷಯದ ಬಗ್ಗೆ ಅವರ ಬಳಿ ಹೇಳಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋ ಬಗ್ಗೆ ನಟರಾಗಿರುವ ದುನಿಯಾ ವಿಜಿ ಮಾತನಾಡಿದ್ದಾರೆ.

ಕೆಲವು ಸಿನಿಮಾ ಮಾಡಿದವರು, ದುನಿಯಾ ವಿಜಿ ಬಳಿ ಆಡಿಯೋ ರಿಲೀಸ್‌ಗೆ ಬಂದಾಗ, ದುನಿಯಾ ವಿಜಿ ಅವರು ಈ ಸಿನಿಮಾ ಓಡುವುದಿಲ್ಲವೆಂದು ಸತ್ಯ ಹೇಳುತ್ತಾರಂತೆ. ಆಗ ಅವರು ಸಿನಿಮಾವನ್ನು ಮತ್ತಷ್ಟು ಇಂಪ್ರೂವ್ ಮಾಡುವುದು ಬಿಟ್ಟು, ಇವನಿಗೆ ದುರಹಂಕಾರವೆಂದು ಬೈಯ್ಯುತ್ತಾರಂತೆ. ಹಾಗಾಗಿ ಇಂದಿನ ಸಿನಿಮಾದ ಕೆಲ ಘಟನೆಗಳ ಬಗ್ಗೆ ವಿಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಯುವ ಪೀಳಿಗೆಯವರು ನಿರ್ದೇಶಕರ ಹಾವ ಭಾವವನ್ನು ಕಲಿತಿರುತ್ತಾರೆ ವಿನಃ ಅವರ ಅನುಭವ ಅರಿಯುವ ಪ್ರಯತ್ನ ಮಾಡುವುದಿಲ್ಲ. ಸ್ಟೈಲ್‌ ಆಗಿ ಆ್ಯಕ್ಷನ್- ಕಟ್ ಹೇಳುವುದನ್ನು ಮಾತ್ರ ಕಲಿಯುತ್ತಾರೆ. ಆದರೆ ನಿರ್ದೇಶಕರು ಯಾವ ರೀತಿ ಯೋಚನೆ ಮಾಡಿ, ಆ ಪದಗಳನ್ನು ಹೇಳಿರುತ್ತಾರೆ ಅನ್ನೋ ಅರಿವು ಅವರಿಗಿರುವುದಿಲ್ಲವೆಂದು, ದುನಿಯಾ ವಿಜಿ ಅನುಭವ ಪಡೆಯಲು ಇಚ್ಛಿಸದ ಯುವ ನಿರ್ದೇಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ದುನಿಯಾ ವಿಜಿ ಪ್ರಕಾರ ಸಿನಿಮಾ ಅಂದ್ರೆ ಅದ್ಧೂರಿ ಬಜೆಟ್ ಆಗಿರಬೇಕಾ ಅಥವಾ ಕಥೆ ಆಗಿರಬೇಕಾ ಅಂತಾ ಕೇಳಿದಾಗ, ಅವರು, ಕಥೆ ಅಂದ್ರೆ ಸಿನಿಮಾ ಆಗಿರಬೇಕು. ಬೇರೆ ಎಲ್ಲವೂ ಕೆಲ ವರ್ಷಗಳಲ್ಲೇ ಮರೆತು ಹೋಗುತ್ತದೆ. ಆದರೆ ಕಥೆ ಉಳಿಯುತ್ತದೆ. ಗ್ಲಾಮರ್ ಕೆಲ ವರ್ಷಗಳಲ್ಲಿ ಮಾಸಬಹುದು. ಆದರೆ ಕಥೆ ಎಂದಿಗೂ ಮಾಸುವುದಿಲ್ಲವೆಂದು ದುನಿಯಾ ವಿಜಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author