Sandalwood: ನಟ ರಘು ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಇಲ್ಲಿ ದುಡ್ಡಿದ್ದವರೂ ಸೈಕಲ್ ಹೋಡಿಬೇಕು. ದುಡ್ಡು ಇಲ್ಲದವರು ಕೂಡ ಸೈಕಲ್ ಹೋಡಿಬೇಕು ಎಂದು ರಘು ಹೇಳಿದ್ದಾರೆ.
ನಿನಾಸಂ ರಂಗಭೂಮಿ ಕಲಾವಿದರಾಗಲು ಹಲವರು ತುಂಬಾ ಪ್ರಯತ್ನಿಸುತ್ತಾರೆ. ಹಾಗೆ ಅವಕಾಶ ಸಿಕ್ಕಿಯೂ ರಂಗಭೂಮಿಯಲ್ಲಿ ಬಂದು ತರಬೇತಿ ಪಡೆದರೂ ಕೂಡ, ಸಿನಿಮಾ, ಸಿರಿಯಲ್‌ನಲ್ಲಿ ಅವಕಾಶ ಸಿಗುವುದು ಡೌಟ್.
ರಘು ಅವರು ಹೇಳುವ ಪ್ರಕಾರ, ಸಿನಿಮಾ ಅನ್ನೋದು ಕೆಲಸವಾಗಿದೆ ಆದರೆ ಉದ್ಯಮವಾಗಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ. ನೆಪೋಟಿಸಂನಿಂದ ಯಾರು ಬರ್ತಾರೋ, ಅವರಿಗೆ ಎಂಟ್ರಿ ಅಷ್ಟೇ ಈಸಿ. ಆದರೆ ಅವರು ತಮ್ಮ ಎಂಟ್ರಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕ“ಂಡರೆ, ಉತ್ತಮ ಟ್ಯಾಲೆಂಟ್ ಇದ್ದರೆ ಮಾತ್ರ, ಅವರು ಸಿನಿರಂಗದಲ್ಲಿ ನಿಲ್ಲುತ್ತಾರೆ. ಇಲ್ಲದಿದ್ದರೆ, ಮುಂದಿನ ಸಿನಿಮಾದಲ್ಲಿ ಅವರಿಗೆಂದೂ ಅವಕಾಶ ಸಿಗುವುದಿಲ್ಲ ಅಂತಾರೆ ರಘು.
ರಘು ನಿನಾಸಂನಲ್ಲಿ ತರಬೇತಿ ಪಡೆದು ಬಂದಾಗ ಅವರು ಸಿನಿ ಜಗತ್ತಿನಲ್ಲಿ ಎಂಥೆಂಥ ಸಮಸ್ಯೆ ಅನುಭವಿಸಿದರು. ಭಾಷೆ ಬಗ್ಗೆ ಅವರಿಗೆ ಎಷ್ಟೆಲ್ಲ ಕಷ್ಟ ಆಯಿತು ಅಂತಾ ಅವರೇ ವಿವರಿಸಿದ್ದಾರೆ ನೋಡಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.