Thursday, August 7, 2025

Latest Posts

Sandalwood: ಪತ್ನಿಗೆ ಜೀವ ಬೆದರಿಕೆ: ಡಿಜಿಐಜಿಪಿಗೆ ಬಿಗ್‌ಬಾಸ್ ಸ್ಪರ್ಧಿ ರಜತ್ ದೂರು

- Advertisement -

Sandalwood: ಬಿಗ್‌ಬಾಸ್ ಸ್ಪರ್ಧಿ ರಜತ್ ಸೌಜನ್ಯ ಪರ ನ್ಯಾಯ ಕೇಳಲು, ದಕ್ಷಿಣಕನ್ನಡದಲ್ಲಿರುವ ಮೃತ ಸೌಜನ್ಯಳ ಮನೆಗೆ ಹೋಗಿ, ಅವರ ಮನೆಯವರನ್ನು ಮಾತನಾಡಿಸಲು ಹೋಗಿದ್ದರು. ಆದರೆ ಇದೇ ವೇಳೆ ಧರ್ಮಸ್ಥಳ ಪರ ಇದ್ದ ಕೆಲವರು, ರಜತ್ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಲ್ಲದೇ, ಅವರ ಪತ್ನಿಗೂ ಬೆದರಿಕೆ ಹಾಕಿದ್ದಾರೆಂದು ರಜತ್ ಆರೋಪಿಸಿದ್ದಾರೆ.

ಅಲ್ಲದೇ, ಈ ಬಗ್ಗೆ ದೂರು ನೀಡಲು ಡಿಜಿಐಜಿಪಿ ಆಫೀಸ್‌ಗೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಶಾರದಾ ಭಟ್ ಎಂಬುವವರು, ಬಿಗ್‌ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ, ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. 1 ಗಂಡು ಮತ್ತು 1 ಹೆಣ್ಣು.ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕ“ಳ್ಳಿ ಅಕ್ಷತಾ ಅವರೇ. ಇದು ಮಂಡ್ಯ ಅಲ್ಲ ಕರಾವಳಿ ಎಂದು ಬರೆದಿದ್ದರು.

ಇದು ಬೆದರಿಕೆ ಸಂದೇಶ ಎನ್ನುವ ರೀತಿಯಲ್ಲಿ ರಜತ್ ಮತ್ತು ಅಕ್ಷತಾ ಇಂದು ಸೈಬರ್ ಸ್ಟೇಷನ್‌ಗೆ ದೂರು ನೀಡಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಶಾರದಾ, ನಾನು ಗಂಡನನ್ನು ಕರೆಯಿಸಿಕ“ಳ್ಳಿ ಎಂದು ಕಳಕಳಿಯಿಂದ ಹೇಳಿದ್ದು, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಆಗಿದ್ದೇನು..?

ನಿನ್ನೆ ಯೂಟ್ಯೂಬರ್‌ ಓರ್ವ ಧರ್ಮಸ್ಥಳದಲ್ಲಿ ತಲೆಬುರುಡು ಪತ್ತೆ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾಗ, ಸ್ಥಳೀಯರು ಗೂಸಾ ನೀಡಿದ್ದಾರೆ. ಈ ವೇಳೆ ರಜತ್ ಕೂಡ ಅಲ್ಲೇ ಇದ್ದರಂತೆ. ಅವರ ಕಾರಿಗೆ ಘಾಸಿ ಮಾಡಿದ್ದಲ್ಲದೇ, ತಮ್ಮ ಮೇಲೂ ಹಲ್ಲೆ ಪ್ರಯತ್ನ ನಡೆದಿದೆ ಎಂದು ರಜತ್ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷತಾಗೆ ಇನ್ನೂ ಹಲವರು ಬೆದರಿಕೆ ಸಂದೇಶ ರವಾನಿಸಿದ್ದಾರೆಂದು ದೂರು ನೀಡಲಾಗಿದೆ.

- Advertisement -

Latest Posts

Don't Miss