ಸಿನಿಮಾ ಸುದ್ದಿ:ಜುಲೈ ತಿಂಗಳ 6 ರಂದು ಬಹುನಿರೀಕ್ಷಿತ ಸಿನಿಮಾ ಪ್ರಬಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಟೀಸರ್ ನಾಳೆ ಬೆಳಿಗ್ಗೆ 5;12 ಕ್ಕೆ ರಿಲೀಸ್ ಮಾಡಲಿದೆ ಚಿತ್ರ ತಂಡ
ಉಗ್ರಂ, ಕೆಜಿಎಫ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೂಲಕ ಜಗತ್ತಿನಾದ್ಯಂತ ಚಿರಪರಿಚಿತವಾಗಿರುವಂತಹ ನಿರ್ದೇಶಕ ಎಂದರೆ ಪ್ರಶಾಂತ್ ನೀಲ್. ಈಗ ಅವರು ತೆಲುಗಿನ ಪ್ರಭಾಸ್ ಜೊತೆ ಸಲಾರ್ ಹೆಸರಿನ ಸಿನಿಮಾ ಮಾಡುತಿದ್ದು. ಬಾಹುಬಲಿ ನಂತರ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್ ಗೆ ಈ ಸಿನಿಮಾ ಹೊಸ ಅಧ್ಯಾಯ ಶುರು ಮಾಡಲಿದ್ದಾರೆ ಎಂಬ ಮಾತು ಸಿನಿ ರಸಿಕರಲ್ಲಿ ಕೇಳಿಬರುತ್ತಿದೆ.
ಇನ್ನು ಬಹು ನಿರೀಕ್ಷಿತ ಸಲಾರ್ ಸಿನಿಮಾ ಜುಲೈ ತಿಂಗಳ 6 ರಂದು ಬೆಳಿಗ್ಗೆ 5;12 ಕ್ಕೆ ಬಿಡುಗಡೆ ಮಾಡಲಿದ್ದಾರೆ. ಈಗ ಸಿನಿ ರಸಿಕರಲ್ಲಿ ಕಾಡುತ್ತಿರುವ ಪ್ರಶ್ನೆ ಎಂದರೆ ಇಷ್ಟು ಬೆಳಿಗ್ಗೆ ಯಾಕೆ ಟೀಸರ್ ಬಿಡುಗಡೆ ಮಾಡಲು ಹೊರಟಿದ್ದಾರೆ ಎಂಬ ಅನುಮಾನದಲ್ಲಿದ್ದಾರೆ.
ಇನ್ನೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕ್ಲೈಮ್ಯಾಕ್ಸ್‌ವೊಂದರ ದೃಶ್ಯದಲ್ಲಿ ಯಶ್ ಹಡಗಿನಲ್ಲಿ ಸಮುದ್ರದಲ್ಲಿರುತ್ತಾರೆ. ಅಲ್ಲಿರುವ ಗಡಿಯಾರದಲ್ಲಿ 5 ಗಂಟೆಯಾಗಿರುತ್ತದೆ ಹಾಗಾಗಿ ಅದೇ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತಿದ್ದಾರೆ.ಇಂಗ್ಲಿಷ್ ಅಕ್ಷರಮಾಲೆಯಲ್ಲಿ 5ನೇ E ಬರುತ್ತೆ. 12ನೇ ಅಕ್ಷರ L ಬರುತ್ತೆ. ಇದು ಪಕ್ಕಾ EL Dorado ಬರುತ್ತೆ ಅಂತಿದ್ದಾರೆ. ಹಾಗೂ ಈ ಸಿನಿಮಾದಲ್ಲಿ ರಾಕಿ ಬಾಯ್ ಇರಲಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಫೈಟ್: ಟಿಕೆಟ್ ತಪ್ಪಿದವರ ಸರ್ಕಸ್..!




