Sandalwood: ಸಿನಿ ಕ್ಷೇತ್ರಕ್ಕೆ ಬರಲು ಎಲ್ಲರಿಗೂ ಮನೆಯಲ್ಲಿ ಬೆಂಬಲ ಸಿಗುವುದಿಲ್ಲ. ಅದರಂತೆ ವಿಶ್ವ ಅವರ ಮನೆಯಲ್ಲೂ ವಿಶ್ವನಿಗೆ ಬೆಂಬಲಿಸಲು ಯಾರಿಗೂ ಮನಸ್ಸಿರಲಿಲ್ಲ. ಹಾಗಾಗಿ ವಿಶ್ವ ಅವರಿಗೆ ಬೇರೆ ಬೇರೆ ಕೆಲಸ ಮಾಡಲು ಹೇಳಲಾಗಿತ್ತು. ಟೈಲರ್, ಕಂಬಿ ಕೆಲಸ ಸೇರಿ ಬೇರೆ ಬೇರೆ ಕೆಲಸಕ್ಕೆ ಸೇರಿಸಿದ್ದರು.
ಆಗ ವಿಶ್ವ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರು. ಟೈಲರಿಂಗ್ ಕೆಲಸ ಕೂಡ ಚೆನ್ನಾಗಿ ಮಾಡುತ್ತಿದ್ದರು. ಆದರೆ ಆ ಕೆಲಸ ಬೇಡವೆಂದು ಕೆಲಸ ಬಿಟ್ಟು ಬಂದರು. ಹಾಗಾಗಿ ಕೋಪಗ“ಂಡ ವಿಶ್ವ ಅವರ ತಂದೆ ಬೇಡ ಬೇಡ ಎಂದರೂ ಕಂಬಿ ಕೆಲಸಕ್ಕೆ ಸೇರಿಸಿದರು. ಅದರ ಮಧ್ಯೆ ವಿಶ್ವ ಅವರಿಗೆ ಸಿನಿಮಾ ನೋಡುವ ಆಸೆ. ಆದರೆ ಹಣವಿಲ್ಲ. ಹಣ ಕೇಳಿದ್ದಕ್ಕೆ ಮಾಲೀಕ ಬೈದರು. ಹಾಗಾಗಿ ಮರುದಿನ ಕಂಬಿಯನ್ನೇ ತೂಕಕ್ಕೆ ಹಾಕಿ, ಅದರಿಂದ ಬಂದ ಹಣದಿಂದ ಸಿನಿಮಾ ನೋಡಿದ್ದರು. ಬಳಿಕ ಆ ಕೆಲಸವನ್ನೂ ಬಿಟ್ಟರು.
ಅದಾದ ಬಳಿಕ ಮಿಕ್ಸಿ, ಫ್ಯಾನ್ ರಿಪೇರಿ ಮಾಡಲು ಸರ್ವಿಸ್ ಸೆೆಂಟರ್ ಕೂಡ ಇಟ್ಟರು.ಆದರೆ ವಿಶ್ವ ಅವರು ಮಿಕ್ಸಿ ರಿಪೇರಿ ಮಾಡುವುದನ್ನು ಬಿಟ್ಟು, ಬರುವವರಿಗೆಲ್ಲ ಕಥೆ ಹೇಳುತ್ತಿದ್ದರು. ಹಾಗಾಗಿ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆಯೇ ಕಡಿಮೆಯಾಯಿತು. ಆಮೇಲೇನಾಯಿತು ಅಂತಾ ಅವರ ಮಾನತಿನಲ್ಲೇ ಕೇಳಿ.