Sandalwood: ಹರಿಣಿಯವರು ತಮ್ಮ ಕಲಾಾ ಪಯಣದ ಬಗ್ಗೆ ಹೇಳುವಾಗ, ನನಗೆ ಈ ಫೀಲ್ಡ್ ಎಲ್ಲವೂ ನೀಡಿದೆ ಎಂದಿದ್ದಾರೆ. ಹಾಗಾಗಿ ಅವರಿಗೆ ಯಾಕಾದ್ರೂ ಈ ಫೀಲ್ಡ್‌ಗೆ ಬಂದನೋ ಅಂತಾ ಅನ್ನಿಸಿಲ್ಲವಂತೆ. ಆದರೆ ತಾಯಿಯ ಪಾತ್ರ ನೀಡಿದಾಗ ಮಾತ್ರ ಅವರಿಗೆ ಇದೇ ಪಾತ್ರ ಯಾಕೆ ನೀಡುತ್ತಾರೋ ತಿಳಿದಿಲ್ಲ ಎನ್ನುತ್ತಾರೆ.
ಈ ಬಗ್ಗೆ ಮಾತನಾಡಿರುವ ಅವರು, ತಾವು ನಿಜ ಜೀವನದಲ್ಲಿ ತಾಯಿಯಾಗಿದ್ದಾಗಲೇ, ಅವರಿಗೆ ತಾಯಿ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತಂತೆ. ಅದಾದ ಬಳಿಕ ಸಿನಿಮಾ, ಸಿರಿಯಲ್ ಎಲ್ಲ ಕಡೆಯೂ ತಾಯಿಯ ಪಾತ್ರವೇ ಹರಿಣಿಗೆ ಸಿಗುತ್ತಾ ಹೋಯಿತು.
ಹರಿಣಿಗೆ ತಾಯಿ ಪಾತ್ರ ಮಾಡೋದು ಇಷ್ಟವೇ. ಹಾಗಂತ ಬೇರೆ ಪಾತ್ರ ಮಾಡಲು ಇಷ್ಟವಿಲ್ಲ ಎಂದಲ್ಲ. ಎಲ್ಲ ರೀತಿಯ ಪಾತ್ರ ಮಾಡಲು ಹರಿಣಿಗೆ ಅಚ್ಚುಮೆಚ್ಚಂತೆ. ಅಲ್ಲದೇ, ಎಲ್ಲರಿಗೂ ಅಮ್ಮ ಅಂತ ನೆನಪು ಬಂದಾಗ, ನಾನೇ ನೆನಪಾಗುತ್ತೀನಲ್ಲ ಅನ್ನೋ ಖುಷಿ ಇದೆ ಅಂತಾರೆ ಹರಿಣಿ. ಈ ಸಂದರ್ಶನ ನೋಡಲು ಈ ವೀಡಿಯೋ ವೀಕ್ಷಿಸಿ.




