Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ.

ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ ಆಗಿತ್ತು. ಈತ ನನಗೆ ಹೀಗೆ ಮಾಡಿದ್ದ ಎಂದು, ಕೆಲವು ನಟಿಯರು ಕ್ಯಾಮೆರಾ ಮುಂದೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೂಪಾ ಅಯ್ಯರ್, ಆ ವಯಸ್ಸಿನಲ್ಲಿ ಯಾರಿಗೂ ಎದುರು ನಿಲ್ಲಬೇಕು. ದೂರು ನೀಡಬೇಕು. ತನ್ನ ಸಮಸ್ಯೆ ಹೇಳಬೇಕು. ನ್ಯಾಯ ಕೇಳಬೇಕು ಅನ್ನೋ ಧೈರ್ಯವಿರುವುದಿಲ್ಲ.

ಆ ಧೈರ್ಯ ಬಂದಾಗಲೇ ತಮಗಾದ ಅನ್ಯಾಯದ ಬಗ್ಗೆ ಮಾತನಾಡುತ್ತಾರೆ. ಅನೇಕ ಹೆಣ್ಣು ಮಕ್ಕಳು ಇಂಥ ಸಮಸ್ಯೆ ಎದುರಿಸಿದ್ದಾರೆ. ಕೆಲವರು ತಮ್ಮ ಸಮಸ್ಯೆ ಹೇಳಿದ್ದಾರೆ ಇನ್ನು ಕೆಲವರು ಇನ್ನೂ ತಮಗಾದ ಕೆಟ್ಟ ಅನುಭವ ಹೇಳಲಿಲ್ಲ.ಆದರೆ ಕೆಲವರು ಲಕ್ಕಿಯಾಗಿದ್ದು, ಇಂಥ ಸ್ಥಿತಿ ಎದುರಿಸದೇ ಮುಂದೆ ಹೋಗಿದ್ದಾರೆ ಎನ್ನುತ್ತಾರೆ ರೂಪಾ ಅಯ್ಯರ್.

ಆದರೆ ನಾವು ಯಾರೋ ಏನೋ ಹೇಳಿದ್ರು, ಮಾಡಿದ್ರು ಅಂತಾ ನಾವು ಅವರನ್ನು ಬ್ಲೇಮ್ ಮಾಡಿಕ“ಂಡೇ ಕಾಲ ಕಳೆಯಬಾರದು. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿ, ನಿಮ್ಮ ಕೆಲಸದ ಬಗ್ಗೆ ನೀವು ಗಮನ ನೀಡಬೇಕು. ಆಗಲೇ ನಾವು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಅಂತಾರೆ ರೂಪಾ ಅಯ್ಯರ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author