Sandalwood: ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಅರುಣಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶೂಟಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ.
ಅರುಣಾ ಅವರಿಗೆ 1 ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ನಿರ್ದೇಶಕರು, ನಿಮ್ಮನ್ನು ನಾವು ಸಿರಿಯಲ್‌ನಲ್ಲಿ ದುಡಿಸಿದಷ್ಟು ದುಡಿಸಲ್ಲ. ಹಾಗಾಗಿ ನಾವು ಇಷ್ಟೇ ಸಂಬಳ ನೀಡುತ್ತೇವೆ ಎಂದರು. ಆ ಬಗ್ಗೆ ನಾವು ಅಂದು ಹೆಚ್ಚು ಮಾತನಾಡಲಿಲ್ಲ. ಆದರೆ ಸಿನಿಮಾ ಆದರೂ ಸಿರಿಯಲ್ ಆದರೂ ನಾವು ನಟಿಸುವ ರೀತಿ ಸೇಮ್ ಇರುತ್ತದೆ. ಎರಡೂ ಕಡೆ ನಾವು ಸೇಮ್ ಪರ್ಫಾಮೆನ್ಸ್ ನೀಡುತ್ತೇವೆ. ಹಾಗಾಗಿ ಅದು ನನಗೆ ಸ್ವಲ್ಪ ಅಸಮಾಧಾನ ತರಿಸಿತ್ತು ಅಂತಾರೆ ಅರುಣಾ.
ಸಿನಿಮಾದಲ್ಲಿ ಕ್ಯಾರೆವ್ಯಾನ್ ಇರುತ್ತದೆ. ಅಲ್ಲೇ ಅಡುಗೆ ಮಾಡಿ, ಅಲ್ಲೇ ಬಡಿಸಲಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಸ್ವಲ್ಪ ಬ್ರೇಕ್ ಸಿಗುತ್ತದೆ. ಆದರೆ ಸಿರಿಯಲ್ ಹಾಗಲ್ಲ. ಅಲ್ಲಿ ಎಲ್ಲ ಕೆಲಸ ಬೇಗ ಬೇಗ ಆಗುತ್ತದೆ ಎಂದು ಸಿನಿಮಾ ಮತ್ತು ಸಿರಿಯಲ್ ನಡುವೆ ಇರುವ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ.
ಆದರೆ ಸಿರಿಯಲ್ ಬಿಟ್ಟರೆ ನಾವು ಪ್ರಸಿದ್ಧಿಯನ್ನು ಕಳೆದುಕ“ಳ್ಳುತ್ತೇವೆ. ಹಾಗಾಗಿ ನಾನು ಭಾರ್ಗವಿ ಎಲ್‌ಎಲ್‌ಬಿ ಸಿರಿಯಲ್‌ನಲ್ಲಿ ನಟಿಸುವ ನಿರ್ಧಾರ ಮಾಡಿದೆ. ಯಾವುದೂ ಇಲ್ಲಿ ಪರ್ಮ್‌ನೆಂಟ್ ಅಲ್ಲಾ. ಆದರೂ ಸಿರಿಯಲ್ ನಮ್ಮ ಪ್ರಸಿದ್ಧಿಯನ್ನು ಹಿಡಿದಿಡುತ್ತದೆ ಅಂತಾರೆ ಅರುಣಾ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




