Sandalwood News: ನಟಿ ಹರಿಣಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಹೇಳಿದ್ದಾರೆ. ತಾಯಿಯ ಪಾತ್ರವೇ ಹೆಚ್ಚು ಮಾಡುವ ಅವರಿಗೆ, ಇನ್ನೂ ಬೇರೆ ಬೇರೆ ರೀತಿಯ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರ ಮಾಡಬೇಕು ಎಂಬ ಹಂಬಲವಿದೆಯಂತೆ.
ಈ ಬಗ್ಗೆ ಮಾತನಾಡಿರುವ ಅವರು, ಕಲಾವಿದರು ಎಲ್ಲ ರೀತಿಯ ಪಾತ್ರ ಮಾಡಲು ಸಿದ್ಧರಿರುತ್ತೇವೆ. ಆದರೆ ಫಿಲ್ಮ್ ಮೇಕರ್ಸ್ ಅದನ್ನು ಗುರುತಿಸಬೇಕು. ಹಾಗಾಗಿ ಅಂಥ 1 ಅವಕಾಶಕ್ಕಾಗಿ ಕಾಯುತ್ತಿರುವೆ ಎನ್ನುತ್ತಾರೆ ಹರಿಣಿ. ವಿದ್ಯಾಬಾಲನ್, ಶೆಫಾಲಿ ಶಾ ಅಂಥವರು ಮಾಡು ಪಾತ್ರಗಳಲ್ಲಿ ಮಿಂಚಬೇಕು ಅನ್ನೋ ಆಸೆ ಇದೆಯಂತೆ.
ಅಲ್ಲದೇ ಆಗಿನ ಪಾತ್ರದಲ್ಲಿ ಲಕ್ಷ್ಮೀ ಅಮ್ಮ, ಆರತಿ ಅಮ್ಮ ಮಾಡಿದಂಥ ಪಾತ್ರಗಳನ್ನು ನಾನು ಮಾಡಬಯಸುತ್ತೇನೆ. ಅಂಥ ಪಾತ್ರಗಳನ್ನು ನಿಭಾಯಿಸಲು ನಾನು ಅರ್ಹಳಾಗಿದ್ದೇನೆ. ಅಂಥ ಪಾತ್ರಗಳು ಬರಲಿ ಎಂದು ಬಯಸುತ್ತೇನೆ ಅಂತಾರೆ ಹರಿಣಿ.
ಈ ಸಂದರ್ಶನ ಪೂರ್ತಿಯಾಗಿ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.




