Sandalwood: ಅನಿರುದ್ಧಗಿಂತಾನೂ ಹೆಚ್ಚು ಸಿನಿಮಾ ನೋಡ್ತಾರಂತೆ ಅವರ ಮಕ್ಕಳು : Aniruddha Jatkar Podcast

Sandalwood: ನಟ ಅನಿರುದ್ಧ ಅವರು ತಮ್ಮ ಮಕ್ಕಳ ಬಗ್ಗೆ ಮಾತನಾಡಿದ್ದು, ಅವರು ತಮಗಿಂತ ಹೆಚ್ಚು ಸಿನಿಮಾ ನೋಡ್ತಾರೆ. ಕಥೆ ಬರೆಯೋದ್ರಲ್ಲೂ ಅವರು ತುಂಬಾ ಇಂಟ್ರೆಸ್ಟ್ ಇದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಅನಿರುದ್ಧ.

ಅಲ್ಲದೇ ಅನಿರುದ್ಧ ಮಕ್ಕಳು ನೃತ್ಯ, ನಿರ್ದೇಶನ ಎಲ್ಲದರಲ್ಲೂ ಆಸಕ್ತಿ ಇರಿಸಿದ್ದು, ಮಗನಿಗೆ ಈಗಾಗಲೇ ಹಲವು ಆಫರ್‌ಗಳೂ ಬರುತ್ತಿದೆಯಂತೆ. ಅವರು ಈಗಾಗಲೇ ಕೆಲ ಶಾರ್ಟ್ ಫಿಲ್ಮ್ ಗಳಲ್ಲೂ ನಟಿಸಿದ್ದಾರಂತೆ. ಅಲ್ಲದೇ ಅನಿರುದ್ಧ ಬಳಿ 6ರಿಂದ 8 ಸಾವಿರ ಬೇರೆ ಬೇರೆ ಭಾಷೆಯ ಸಿನಿಮಾಗಳಿದ್ದು, ಆ ಎಲ್ಲ ಭಾಷೆಯ ಸಿನಿಮಾಗಳನ್ನು ತಂದೆಗಿಂತ ಮಕ್ಕಳೇ ಹೆಚ್ಚು ನೋಡ್ತಾರಂತೆ.

ಇನ್ನು ರೀಲ್ಸ್ ಮಾಡುವಾಗ ಮಕ್ಕಳು ಅಪ್ಪಂಗೆ ಡಾನ್ಸ್ ಹೇಳಿಕ“ಟ್ರೆ, ಅನಿರುದ್ಧ ಅವರು ಬೈಸ್ಕೋಂಡು ಬೈಸ್ಕೋಂಡು ಡಾನ್ಸ್ ಮಾಡ್ತಾರೆಂದು ಚಿಕ್ಕ ನಗೆ ಬೀರಿದ್ದಾರೆ. ಇನ್ನು ವಿಷ್ಣುವರ್ಧನವರಿಗೆ ಸಂಬಂಧಿಸಿದ ಸಂಘಟನೆ ವಿಷಯದಲ್ಲಿ ನಡೆದ ಅಸಮಾಧಾನದ ಸಂಗತಿ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author