Sandalwood: ನಟ ರಾಜವರ್ಧನ್ ತಮ್ಮ ಸಿನಿಮಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ. ಅವರು ಇಲ್ಲಿಯವರೆಗೂ ಬಂದು ಪ್ರಸಿದ್ಧಿ ಪಡೆಯಲು ಜೀವನದಲ್ಲಿ ಏನೇನು ಸಮಸ್ಯೆ ಅನುಭವಿಸಿದ್ದಾರೆ ಅನ್ನೋದನ್ನೂ ವಿವರಿಸಿದ್ದಾರೆ.
ರಾಜವರ್ಧನ್ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ಧರಿಸಿದಾಗ, ಹಲವು ಕಡೆ ಪಾರ್ಶಿಯಾಲಿಟಿ ಅನುಭವಿಸಿದ್ದಾರೆ. ಇಷ್ಟು ಉತ್ತಮ ಬಜೆಟ್ ಸಿನಿಮಾ ಮಾಡ್ತಿದ್ದೀರಿ ಅಂದ್ರೆ, ಬೇರೆ ನಟನನ್ನೇ ಆಯ್ಕೆ ಮಾಡಬಹುದಿತ್ತಲ..? ಇವನ್ಯಾಕೆ ಹಾಕಿದ್ರಿ ಅಂತಾ ಕೇಳಿ ಅವಮಾನ ಮಾಡಿದ್ದಿದೆ ಎಂದು ರಾಜವರ್ಧನ ತಮಗಾದ ಅವಮಾನವನ್ನು ನೆನೆಸಿಕ“ಂಡಿದ್ದಾರೆ.
ಇನ್ನು ಕೆಲವು ಕಡೆ ಅವಕಾಶ ನೀಡಲು ಹಣ ಕೇಳಿ, ಹಣವಿಲ್ಲದಿದ್ದಾಗ ಸಿನಿಮಾದಿಂದ ಸೆಟ್‌ಗೆ ಹೋಗಿ ಮೇಕಪ್ ಅಳಿಸಿದ ಉದಾಹರಣೆಗಳೂ ಇದೆ ಎಂದು ರಾಜವರ್ಧನ ಹಳೆಯ ಜೀವನ ನೆನೆದಿದ್ದಾರೆ.
ಇದಾದ ಬಳಿಕ ಸಂಗೀತದ ಪರಿಚಯವೇ ಇಲ್ಲ ರಾಜವರ್ಧನ್ ಅವರನ್ನು ಹಂಸಲೇಖ ಅವರು ಕರೆ ಮಾಡಿ, ಮಾತನಾಡಬೇಕು ಎಂದು ಹೇಳಿದರಂತೆ. ಹೆದರಿಕೆಯಿಂದಲೇ ಹೋದವರಿಗೆ ಸಿಕ್ಕಿದ್ದು 1 ಪುಸ್ತಕ. ಅದನ್ನು ಓದಿ, ಮತ್ತೆ ವಾಪಸ್ ಕಾಲ್ ಮಾಡಿದಾಗ, ಈ ಪುಸ್ತಕದಲ್ಲಿ ಬರುವ ಭರಮಣ್ಣನ ಪಾತ್ರವನ್ನು ನೀವು ಮಾಡುತ್ತಿದ್ದೀರಿ. ಹಂಸಲೇಖ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆಂದು ಹೇಳಿದರಂತೆ. ಬಳಿಕ ರಾಜವರ್ಧನ್ ಅವರ ಅದೃಷ್ಟ ಅಲ್ಲಿಂದ ಬದಲಾಯಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.