Wednesday, July 16, 2025

Latest Posts

Sandalwood: ಸಂದರ್ಶನದ ಸಮಯದಲ್ಲಿ ನಟಿ ಖುಷಿ ಕಣ್ಣೀರು ಹಾಕಿದ್ದೇಕೆ..?

- Advertisement -

Sandalwood: ನೀನಾದೆ ನಾ ಖ್ಯಾತಿಯ ನಟಿ ಖುಷಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಭಾವುಕರಾಗಿದ್ದಾರೆ.

ಖುಷಿ ಡೈರೆಕ್ಟ್ ಆಗಿ ಸಿರಿಯಲ್‌ನಲ್ಲಿ ಆಯ್ಕೆ ಆಗಿ ಸ್ಕ್ರೀನ್‌ ಮೇಲೆ ಬಂದವರಲ್ಲ. ಬದಲಾಗಿ ಹಲವು ಬಾರಿ ರಿಜೆಕ್ಟ್ ಆಗಿ ಸೆಲೆಕ್ಟ್ ಆದವರು. ಈ ಬಗ್ಗೆ ಖುಷಿಯವರೇ ಮಾತನಾಡಿದ್ದು, ನನ್ನ ಕಿವಿಯಿಂದಾಗಿ, ನನ್ನ ಧ್ವನಿಯಿಂದಾಗಿ, ಹೀಗೆ ಹಲವು ಬಾರಿ ನಾನು ರಿಜೆಕ್ಟ್ ಆಗಿದ್ದೆ. ಆದರೆ ಈಗ ಜನ ನನ್ನ ಧ್ವನಿಯನ್ನು ಮೆಚ್ಚುತ್ತಾರೆ ಅಂತಾ ಸಂತಸ ವ್ಯಕ್ತಪಡಿಸಿದ್ದಾರೆ.

ನೀನಾದೆ ನಾ ಸಿರಿಯಲ್‌ನಲ್ಲಿ ನನಗೆ ಅವಕಾಶ ಸಿಕ್ಕ ಬಳಿಕ ನನ್ನ ಜೀವನವೇ ಬದಲಾಯಿತು. ಅದರಿಂದಲೇ ನನಗೆ ಕಾನ್ಫಿಡೆನ್ಸ್ ಬಂದಿದ್ದು. ಅಲ್ಲಿಂದಲೇ ಜನ ನನ್ನನ್ನು ಗುರುತಿಸಲು ಶುರು ಮಾಡಿದರು. ನನ್ನ ಧ್ವನಿ, ನನ್ನ ಲುಕ್ ಎಲ್ಲವೂ ನನಗೆ ಪ್ಲಸ್ ಪಾಯಿಂಟ್ ಆಯಿತು ಅಂತಾರೆ ಖುಷಿ.

ನನಗೆ ಪ್ರಸಿದ್ಧ ನಟ-ನಟಿಯರೆಲ್ಲ ಕಾಲ್ ಮಾಡಿ, ಮೆಸೇಜ್ ಮಾಡಿ ನನ್ನ ನಟನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಪ್ರಸಿದ್ಧಿ ಸಿಕ್ಕಿದ್ದಕ್ಕೆ ನಾನು ಪ್ರತಿದಿನ ರಾತ್ರಿ ದೇವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಖುಷಿ. ಆದರೆ ಖುಷಿ ಏನೆಲ್ಲ ಸಮಸ್ಯೆಗಳನ್ನು ಅನುಭವಿಸಿದರು ಎನ್ನುವ ಬಗ್ಗೆ ಖುಷಿ ಮಾತನಾಡುತ್ತ ಭಾವುಕರಾಗಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss