Sandalwood: ನಟ ರಾಕೇಶ್ ಅಡಿಗ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ರಾಕೇಶ್ ಹೇಗೆ ಸಿನಿ ಕ್ಷೇತ್ರಕ್ಕೆ ಬಂದರು ಅನ್ನೋ ಬಗ್ಗೆ ಹೇಳಿದ್ದಾರೆ.
ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡುವ ಅವಕಾಶ ಸಿಕ್ಕರೂ ಕೆಲವರು ತಲೆ ಮೇಲೆ ಕಿರೀಟ ಹಾಕಿ ತಿರುಗುತ್ತಾರೆ. ರಾಕೇಶ್‌ಗೆ ಯಾಕೆ ಕಿರೀಟ ಇಲ್ಲ ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್, ಅದರ ಅವಶ್ಯಕತೆ ಇಲ್ಲ ಸರ್. ಅದು ತುಂಬಾ ಭಾರ ಎಂದು ತಮಾಷೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಶಿವಮಣಿ ಸರ್ ಯಾವಾಗಲೂ ಹೇಳುವವರು, ಕಲಾವಿದ 1 ಉತ್ತಮ ಸಿನಿಮಾ ನೀಡಿದರೆ, ಆತ ಸಾಲು ಸಾಲು ಸಿನಿಮಾ ಮಾಡದಿದ್ದರೂ, ಆ 1 ಉತ್ತಮ ಸಿನಿಮಾ ಅವನ ಹೆಸರನ್ನು ಕಾಪಾಡುತ್ತದೆ. ಇನ್ನು ಕೆಲ ವರ್ಷ ನೀನು ಗೆಲುವಿನ ಖುಷಿಯಲ್ಲಿದ್ದಾಗ ಹೇಗೆ ನಡೆದುk“ಂಡೆ ಅದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳ್ತಾರೆ ಜೋಶ್ ಹುಡುಗ ರಾಕೇಶ್ ಅಡಿಗ.
ರಾಕೇಶ್ 10ನೇ ತರಗತಿಯಿಂದಲೇ ಶಾರ್ಟ್ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗೋದು ತುಂಬಾ ಸುಲಭ. ಸಂದರ್ಶನ ನೀಡಿ, ಆಯ್ಕೆಯಾಗೋದೇ, ನಟನೆ ಮಾಡೋದೇ ಅಂತಾ ಭಾವಿಸಿದ್ದರಂತೆ ರಾಕೇಶ್. ಆದರೆ ಸಿನಿಮಾ ಫೀಲ್ಡ್‌ಗೆ ಬಂದ ಬಳಿಕ, ಅವರಿಗೆ ಫೋಟೋಶೂಟ್ ಮಾಡಿಸಬೇಕು. ಹಲವು ಕೆಲಸಗಳ ಬಳಿಕ ಆಡಿಶನ್ ನೀಡಿ, ಅದರಲ್ಲಿ ಆಯ್ಕೆಯಾಗಬೇಕು ಎಂದು ತಿಳಿಯಿತು ಎನ್ನುತ್ತಾರೆ ರಾಕೇಶ್. ಅವರ ಸಿನಿ ಜರ್ನಿ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




