Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿರಿಯಲ್ ನಟನೆಯ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಅನಿರುದ್ಧ ಅವರು ಈ ಮುನ್ನ ಜೊತೆಜೊತೆಯಲಿ ಸಿರಿಯಲ್‌ನಲ್ಲಿ ನಟಿಸಿದ್ದರು. ಇದೀಗ ಸೂರ್ಯವಂಶ ಸಿರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಹಾಗಾದ್ರೆ ಅನಿರುದ್ಧ ಅವರು ಬರೀ ಸಿರಿಯಲ್‌ಗೆ ಸೀಮಿತವಾದ್ರಾ ಅನ್ನೋ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅನಿರುದ್ಧ, ನಾನು ಯಾವುದಕ್ಕೂ ಸಿಮೀತವಲ್ಲ. ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಗದಿದ್ದಲ್ಲಿ, ಸಿರಿಯಲ್‌ನಲ್ಲಿ ನಟಿಸಿದ್ರೆ ತಪ್ಪೇನು..? ಆ್ಯಡ್‌ನಲ್ಲೂ ನಟಿಸುತ್ತೇನೆ. ವೆಬ್ ಸಿರೀಸ್ ಮಾಡುತ್ತೇನೆ. ಅದರಲ್ಲೇನು ತಪ್ಪು ಅಂತಾ ಕೇಳಿದ್ದಾರೆ ಅನಿರುದ್ಧ.
ಇನ್ನು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಸ್ವಚ್ಛತಾ ರಾಯಭಾರಿಯಾಗಿದ್ದರ ಬಗ್ಗೆ, ಕೆಲವರು ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆಯೂ ಅನಿರುದ್ಧ ಮಾತನಾಡಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




