Sandalwood: ಬಿಗ್ ಬಾಸ್ ಗೆಲ್ಲೋದು ಗಿಲ್ಲಿನೇ !: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ಬಾರಿ ಬಿಗ್‌ಬಾಸ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಆಡೋವ್ರೆಲ್ಲಾ ಸ್ಪರ್ಧೆ ಗೆಲ್ಲಕ್ಕಾಗಲ್ಲ ಎಂದಿದ್ದಾರೆ.

ಬಿಗ್ಬಾಸ್ ನೋಡಿದಾಗ ಕೆಲವು ಸನ್ನಿವೇಶಗಳಲ್ಲಿ ಕೆಲವು ಬದಲಾವಣೆಯಾಗುತ್ತದೆ. ಯಾವುದೇ ವಿಷಯಕ್ಕೆ ರಘು ಎಲ್ಲರಿಗೂ ಉತ್ತಮ ಎನ್ನಿಸಬಹುದು. ಅದೇ ಬೇರೆ ವೀಡಿಯೋ ರಿಲೀಸ್ ಆದಾಗ, ಇಷ್ಟೇನಾ ರಘು ಎನ್ನಿಸಲು ಶುರುವಾಗುತ್ತದೆ. ಹಾಗಾಗಿ 12 ವಾರಗಳ ಕಾಲ ಇಷ್ಟವಾಗಿದ್ದ ವ್ಯಕ್ತಿ ಮುಂದಿನ ವಾರ ಅಂದ್ರೆ ಉತ್ತಮನಲ್ಲ ಅಂತಾ ಅನ್ನಿಸೋಕ್ಕೆ ಶುರುವಾಗಬಹುದು. ಹೀಗೆ ಕೆಲವು ಸನ್ನಿವೇಶಗಳಲ್ಲಿ ಸ್ಪರ್ಧಿಗಳ ಬಗೆಗಿನ ಅಭಿಪ್ರಾಯ ಭಿನ್ನವಾಗಿರುತ್ತದೆ ಅಂತಾರೆ ರೂಪೇಶ್ ರಾಜಣ್ಣ.

ಇನ್ನು ಬಿಗ್‌ಬಾಸ್ ಸ್ಪರ್ಧೆ ಗೆಲ್ಲೋದ್ಯಾರು ಅಂತಾ ಕೇಳಿದ್ದಕ್ಕೆ ಉತ್ತರಿಸಿದ ರೂಪೇಶ್ ಗಿಲ್ಲಿ ಗೆಲ್ಲುವ ಚಾನ್ಸ್ ಹೆಚ್ಚಾಗಿದೆ. ಆದರೆ ಟಾಸ್ಕ್ ಆಡಿದ್ರೆ ಬಿಗ್‌ಬಾಸ್ ಗೆಲ್ಲಬಹುದು ಅಂತಾ ಹಲವರು ಭಾವಿಸಿದ್ದಾರೆ. ಆದರೆ ಅದು ತಪ್ಪು. ಆಡಿದರೆ ಮಾತ್ರ ಬಿಗ್‌ಬಾಸ್ ಗೆಲ್ಲಲು ಸಾಧ್ಯವಿಲ್ಲ ಅಂತಾರೆ ರೂಪೇಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author