Sunday, September 15, 2024

Latest Posts

ಎರಡು ಪಂದ್ಯದ ಸಂಭಾವನೆಯನ್ನ ಮೈದಾನದ ಸಿಬ್ಬಂದಿಗಳಿಗೆ ನೀಡಿದ ಯಂಗ್ ಕ್ರಿಕೆಟರ್..!

- Advertisement -

ಟೀಮ್ ಇಂಡಿಯಾ ಯಂಗ್ ಕ್ರಿಕೆಟರ್ ಒಬ್ಬರು, ಕ್ರೀಡಾಂಗಣ ಸಿಬ್ಬಂದಿಗಳಿಗೆ ನೆರವಾಗಿದ್ದಾರೆ. ಎರಡು ಪಂದ್ಯಗಳ ಸಂಭಾವನೆಯನ್ನ ತಿರುವನಂತಪುರಂ ನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ ನ ಸಿಬ್ಬಂದಿಗಳಿಗೆ ನೀಡಿದ್ದಾರೆ. ಹೌದು.. ಕೇರಳಾದ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ 1 ಲಕ್ಷ 50 ಸಾವಿರ ರೂ. ಗಳನ್ನ ಮೈದಾನ ಸಿಬ್ಬಂದಿಗಳಿಗೆ ನೀಡಿದ್ದಾರೆ.

ಇತ್ತೀಚಿಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ದ ಭಾರತ ಎ ತಂಡವನ್ನ ಪ್ರತಿನಿಧಿಸಿದ್ದ ಸಂಜು, ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಈ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ, 5 ಪಂದ್ಯಗಳ ಏಕದಿನ ಸರಣಿಯನ್ನ 4-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಇನ್ನೂ ಭಾರತ ಹಿರಿಯ ತಂಡದ ಪರವಾಗಿಯೂ ಕೆಲವು ಪಂದ್ಯಗಳನ್ನಾಡಿರುವ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್ ಮನ್, ಸಂಜು ಸ್ಯಾಮ್ಸನ್ ಸದ್ಯ ಭಾರತ ಎ ತಂಡವನ್ನ ಪ್ರತಿನಿದಿಸುತ್ತಿದ್ದಾರೆ. ಹೀಗಾಗಿ ಪ್ರತಿ ಪಂದ್ಯಕ್ಕೆ 75 ಸಾವಿರ ರೂ. ಸಂಭಾವನೆ ಪಡೆಯುತ್ತಿರುವ ಸ್ಯಾಮ್ಸನ್, ತಮ್ಮ ಎರಡು ಪಂದ್ಯಗಳ ಸಂಭಾವನೆಯನ್ನ ಮೈದಾನದ ಸಿಬ್ಬಂದಿಗಳಿಗೆ ನೀಡಿದ್ದಾರೆ.

https://www.youtube.com/watch?v=dGjIh01j5YE
- Advertisement -

Latest Posts

Don't Miss