Saturday, July 20, 2024

Latest Posts

Cultural activites: ಸಂತೋಷ್ ಲಾಡ್ ಫೌಂಡೇಶನ್‌ನಿಂದ ಸಾಂಸ್ಕೃತಿಕ ಸಂಭ್ರಮ

- Advertisement -

ಧಾರವಾಡ:  77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸೆ. 3ರಂದು ಸಂಜೆ 5 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡ ಕುಟುಂಬಗಳಿಗೆ ಬೆಳಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾಪೂರ್ವಕ ವಿಶೇಷ ಲೇಸರ್ ಶೋ ಹಾಗೂ ಸಾಂಸ್ಕೃತಿಕ ಸಂಭ್ರಮ, ಸಾಧಕರು ಹಾಗೂ ಯೋಧರಿಗೆ ಸನ್ಮಾನ ಮತ್ತು ನಮ್ಮ ಭವ್ಯ ಪರಂಪರೆ ಬಿಂಬಿಸುವ ಕಾರ್ಯಕ್ರಮ ಜರುಗಲಿವೆ. ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರಿಂದ ಕಿರುನಾಟಕ ಹಾಗೂ ಗಾಯಕಿ ಎಂ.ಡಿ ಪಲ್ಲವಿ ಮತ್ತು ಇಂಡಿಯನ್ ಐಡಲ್- 18ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವಿದೆ.

ಫ್ಯಾಷನ್ ಶೋ ರಂಗು: ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹಾಗೂ ತಂಡದಿಂದ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಫ್ಯಾಷನ್ ಶೋ ಜರುಗಲಿದೆ. 15ಕ್ಕೂ ಹೆಚ್ಚು ಮಿಸ್ ಇಂಡಿಯಾ ಸ್ಪರ್ಧಿಗಳು ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನುಟ್ಟು ಹೆಜ್ಜೆ ಹಾಕಲಿದ್ದಾರೆ. ಅದ್ಧೂರಿ ಕಾರ್ಯಕ್ರಮಕ್ಕೆ ಕೆಸಿಡಿ ಮೈದಾನದಲ್ಲಿ ಸಿದ್ಧತಾ ಕಾರ್ಯಗಳು ನಡೆದಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Police: “ಸುಳ್ಳ” ಗ್ರಾಮದಲ್ಲಿ ಅಂದರ್-ಬಾಹರ್” 2ಬೈಕ್ ಸಮೇತ ಐವರನ್ನು ವಶಕ್ಕೆ ಪಡೆದ ಪೊಲೀಸ್

Hubli Police : ಹುಬ್ಬಳ್ಳಿ ಸಬ್ ಇನಸ್ಪೆಕ್ಟರ್ ಲಂಚ ಸ್ವೀಕಾರ;ಅಮಾನತು..!

Election Result: ರಾಜಕೀಯ ಗೊಂದಲಕ್ಕೆ ಕಾರಣವಾದ ಚುನಾವಣೆ ಫಲಿತಾಂಶ..!

- Advertisement -

Latest Posts

Don't Miss