ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ರೆ ಸುವರ್ಣಸೌಧ ಎದುರಿಗೆ ನಿರಂತರ ಧರಣಿ ಸತ್ಯಾಗ್ರಹ: ಅಶೋಕ ಪೂಜಾರಿ

www.karnatakatv.net : ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಕಾರ್ಯದರ್ಶಿ ಮಟ್ಟದ ಇಲಾಖೆ ಅಧಿಕಾರಿಗಳ ಕಚೇರಿ ಸ್ಥಳಾಂತರ ಮಾಡಬೇಕು ಜೊತೆಗೆ ಅಧಿವೇಶನ ಎರಡು ವರ್ಷ ಕಳೆದರೂ ಸಹ ಅಧಿವೇಶನ ನಡೆಸಿಲ್ಲ ಈ ಬಾರಿ ಅಧಿವೇಶನ ನಡೆಸದಿದ್ದರೆ ಸೆಪ್ಟೆಂಬರ್ 13 ರಿಂದ ಬೆಳಗಾವಿ ಸುವರ್ಣಸೌಧ ಎದುರಿಗೆ ನಿರಂತರ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಉತ್ತರ ಕರ್ನಾಟಕ ವಿಕಾಸವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ, ಜೊತೆಗೆ ಗಡಿ ಸಮಸ್ಯೆ ಬಗ್ಗೆ ಆಳವಾದ ಜ್ಞಾನದ ಜೊತೆಗೆ ಸಾಕಷ್ಟು ಹೋರಾಟ ಮಾಡಿದ ಉತ್ತರ ಕರ್ನಾಟಕ ಮೂಲದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿದ್ದಾರೆ.ಬೊಮ್ಮಾಯಿ ಸಿಎಂ ಆಗಿದ್ದರಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಜೊತೆಗೆ ಆಶಾದಾಯಕ ಭಾವನೆ ಇದ್ದು, ನಾಳೆ ಬರುತ್ತಿರುವ ಸಿಎಂ ಅವರಿಗೆ ಭೇಟಿಯಾಗಿ ವಿವಿಧ ಬೇಡಿಕೆಗಳ ಪಟ್ಟಿಯ ಮನವಿಯನ್ನು ಸಲ್ಲಿಸುತ್ತೇವೆ ಎಂದರು.

ಸುವರ್ಣ ವಿಧಾನಸೌಧ ಒಂದು ಮ್ಯೂಸಿಯಂ ಆಗಿದೆ: ಸುರ್ವಣ ಸೌಧ ನಿರ್ಮಿಸಿ ದಶಕಗಳೇ  ಕಳೆದರೂ ಸುರ್ವಸೌಧವನ್ನು ಯಾವ  ಉದ್ದೇಶಕ್ಕೆ ನಿರ್ಮಿಸಿದ್ದಾರೆ ಎಂಬ ಗೊಂದಲದಲ್ಲಿ ಉತ್ತರ ಕರ್ನಾಟಕದ ಜನರಿದ್ದಾರೆ. ಸುವರ್ಣಸೌಧ ‌ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರ ಆಗುತ್ತದೆ ಎಂದು ಅಂದುಕೊಂಡಿದ್ವಿ. ಆದ್ರೆ ಈವರೆಗೂ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ರಾಜ್ಯಮಟ್ಟದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸದ್ಯ ಸುರ್ವಣಸೌಧ ಮ್ಯೂಸಿಯಂ ರೀತಿ ಬದಲಾಗಿದ್ದು, ಬೆಂಗಳೂರಿನ ವಿಧಾನ ಸಭೆಯ ಪ್ರತಿರೂಪದಂತೆ ನಿರ್ಮಿಸಿರುವ ಕಟ್ಟಡವಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ಬೊಮ್ಮಾಯಿ ಸರ್ಕಾರವಾದರೂ ಸರ್ಕಾರದ ಕಾರ್ಯದರ್ಶಿ ಮಟ್ಟದ ಕಾರ್ಯಾಲಯಗಳು, ನಿರ್ದೇಶಕ ಮಟ್ಟದ ಕಾರ್ಯಾಲಯ ಸ್ಥಳಾಂತರ ಮಾಡಬೇಕು. ವರ್ಷದಲ್ಲಿ ಅರ್ಧ ಅವಧಿಯ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕು. ಗಡಿಸಮಸ್ಯೆ ಪರಿಹಾರಕ್ಕೆ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜ್ಯದಾನಿಯನ್ನಾಗಿ ಘೋಷಣೆ ಮಾಡಬೇಕು. ಒಂದು ವೇಳೆ ಉತ್ತರ ಕರ್ನಾಟಕದ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡದಿದ್ರೆ ಮತ್ತು ಬೆಂಗಳೂರಿನಲ್ಲಿ ಈ ಬಾರಿ ಅಧೀವೇಶನ ನಡೆಸಿದರೆ ಸೆಪ್ಟೆಂಬರ್ 13ರಿಂದ ಬೆಳಗಾವಿ ಸುವರ್ಣಸೌಧ ಎದುರಿಗೆ 10ದಿನಗಳ ಕಾಲ ನಿರಂತರವಾಗಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುತ್ತೆ. ಸರ್ಕಾರ ಅದಕ್ಕೂ ಬಗ್ಗದೇ ಇದ್ರೆ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯದ ಹೋರಾಟ ಕೂಗು ಆರಂಭವಾಗುತ್ತೆ  ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಾಗೇಶ್ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ

About The Author