ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಕಿಚ್ಚು ಕ್ಷಣ, ಕ್ಷಣಕ್ಕೂ ಹೆಚ್ಚಾಗುತ್ತಿದೆ. ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಿದ್ದರಾಮಯ್ಯ ಉತ್ತರಾಧಿಕಾರಿ ಬಗ್ಗೆಯೂ ಮಾತನಾಡಿದ್ದು, ಸತೀಶ್ ಜಾರಕಿಹೊಳಿ ಹೆಸರನ್ನು ಮುನ್ನಲೆಗೆ ತಂದಿದ್ದಾರೆ. ಯತೀಂದ್ರ ಅವರು ಸ್ಫೋಟಕ ಸುಳಿವು ಕೊಟ್ಟ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ತಮ್ಮ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ಎಲ್ಲವನ್ನೂ ಪಕ್ಷ ನಿರ್ಧಾರ ಮಾಡಬೇಕು. ಯತೀಂದ್ರ ಅವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಪಕ್ಷ, ಶಾಸಕರು ತೀರ್ಮಾನ ಮಾಡ್ತಾರೆ. ಇನ್ನೂ ಬಹಳ ದಿನ ಇದೆ ಕಾದು ನೋಡೋಣ. ಸದ್ಯಕ್ಕೆ ಏನೂ ಹೇಳೋದಕ್ಕೆ ಆಗಲ್ಲ. ಎಲ್ಲರನ್ನೂ ಜೊತೆಗೂಡಿ ಹೋಗುವಂತಹ ಪ್ರಯತ್ನ ಮಾಡ್ತಿದ್ದೇವೆ. ಅಂತಿಮವಾಗಿ ಪಕ್ಷವೇ ಮುಖ್ಯ.
ಅಹಿಂದ ನಾಯಕತ್ವ ಅನ್ನೋದು ಮೊದಲಿನಿಂದಲೇ ಇದೆ. ಹಿಂದೆಯೂ ಇದೆ. ಈಗಲೂ ಇದೆ, ನಾಳೆಯೂ ಇರುತ್ತದೆ. ಅದಿಲ್ಲದೇ ರಾಜಕಾರಣ ಮಾಡೋಕೆ ಆಗೋದಿಲ್ಲ. ಎಲ್ಲವನ್ನೂ ಇಂದೇ ಹೇಳೋದಕ್ಕೆ ಆಗಲ್ಲ. ಕಾಯಬೇಕು ಅಷ್ಟೇ.
ನಾವು 2028ಕ್ಕೆ ಕ್ಲೇಮ್ ಮಾಡ್ತೀವಿ ಅಂತಾ ಹೇಳಿದ್ದೇವಲ್ಲ. ಇನ್ನೂ 30 ತಿಂಗಳು ಇದೆ. ಆಗಿನ ವಾತಾವರಣದ ಮೇಲೆ ಡಿಪೆಂಡ್ ಆಗುತ್ತೆ. ಎಲ್ಲರಿಗೂ ಹೇಳೋದಕ್ಕೆ ಸ್ವತಂತ್ರ ಇದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡೋಣ. ಹೀಗಂತ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಇಷ್ಟು ದಿನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗಷ್ಟೇ ಸಿಎಂ ರೇಸ್ ಸೀಮಿತವಾಗಿತ್ತು. ಇವರಿಬ್ಬರ ಸುತ್ತವೇ ಊಹಾಪೋಹಗಳು ಸುತ್ತವರೆದಿದ್ವು. ಆದ್ರೀಗ ಈ ಇಬ್ಬರು ನಾಯಕರ ಮಧ್ಯೆ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದಿದೆ. ಈ ಮೂಲಕ ಅಹಿಂದ ನಾಯಕತ್ವದ ಕೂಗು ಮತ್ತಷ್ಟು ಹೆಚ್ಚಾಗಿದೆ.

