special story
ಈ ಲಿವ್ ರಿಲೇಷನ್ಷಿಪ್ ಜೀವನ ಬಹಳ ಜನರ ಜೀವನದಲ್ಲಿ ಸಕತ್ತಾಗಿ ಆಟವಾಡಿಬಿಡುತ್ತೆ. ಹಲವರು ಪ್ರಾಣ ಕಳೆದುಕೊಳ್ಳುವುದಕ್ಕೂ ಕಾರಣವಾಗಿದೆ. ಆದರೆ ಇಲ್ಲೊಂದು ಲಿವ್ ಇನ್ ಸಂಬಂಧ ಹುಡುಗನ ಜೀವನದಲ್ಲಿ ಯಾವರೀತಿ ಆಟವಾಡಿದನೋಡಿ.ಲಿವ್ ಇನ್ ರಿಲೆಷನಷಿಪ್ ನಲ್ಲಿ ಇದ್ದವ ಮೊದಲು ಮಗು ಕರುಣಿಸಿ ನಂತರ ಆಕೆಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳಲು ಹೊರಟಾಗ ಹಳೆ ಲವರ್ ಮಗುವಿನೊಂದಿಗೆ ಆಗಮನವಾಗಿದೆ. ಕಲ್ಯಾಣ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಭೂಪ.
ಈ ಘಟನೆ ನಡೆದಿರೋದು ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.ಕಳೆದ ಎರಡು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಹೋಗಿದ್ದ ಮಾದಲಿ ಸತ್ಯಬಾಬು 25 ಎಂಬ ಯುವಕ ಸ್ವಪ್ನ ಕುಮಾರಿಎಂಬ ಯುವತಿಯನ್ನು ಪ್ರೀತಿಸುತಿದ್ದ. ನಂತರದಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟು ಸ್ವಪ್ನ ಕುಮಾರಿ ಒಂದು ಮಗುವಿಗೆ ಜನ್ಮ ನೀಡಿದಳು. ಇಬ್ಬರ ಮನೆಯಲ್ಲಿ ತಮ್ಮ ವಿಷಯ ತಿಳಿಸಿ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲು ನಿರ್ದರಿಸಿದ್ದರು.ಆದರೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬೇರೆ ಬೇರೆ ವಾಸಿಸಲು ಮುಂದಾದರೂ. ನಂತರ ಇಮನು ವಿದ್ಯಭ್ಯಾಸ ಮುಗಿಸಿ ವಾಪಸ್ಸು ಊರಿಗೆ ಮರಳಿದನು. ಈ ನಡುವೆ ಸತ್ತಿಬಾಬು ಕುರ್ನವಳ್ಳಿ ಗ್ರಾಮದ ಸುನೀತಾ ಎಂಬ ಮತ್ತೋರ್ವ ಮಹಿಳೆಯನ್ನು ಪ್ರೀತಿಸಿ ಒಟ್ಟಿಗೆ ಜೀವನ ನಡೆಸಲಾರಂಭಿಸಿದ್ದ. ನಂತರ ಸುನಿತಾ ಮಗುವಿಗೆ ಜನ್ಮ ನೀಡಿದ್ದು, ಸದ್ಯ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ವಿಷಯ ತಿಳಿದ ಸ್ವಪ್ನ ಕುಮಾರಿ ತಾನು ಸಹ ಸತ್ಯಬಾಬುನ ಜೊತೆ ವಾಸಿಸಲು ಇಚ್ಚಿಸಿದಳು.ನಂತರ ಸ್ವಪ್ನ ಕುಮಾರಿ ಪೋಷಕರು ಒಪ್ಪಿ ಮೂರು ಜನಕ್ಕೆ ಮದುವೆ ಮಾಡಿಸಲು ನಿರ್ದರಿಸಿದ್ದರು.
ಗುರುವಾರ ಬೆಳಗ್ಗೆ ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಲಗ್ನ ಪತ್ರಿಕೆ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದು, ಮೂವರೂ ಮಧ್ಯರಾತ್ರಿ ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪರಸ್ಪರ ಮದುವೆಯಾಗಿದ್ದಾರೆ.
ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ
ಭಾನುವಾರ ಮಂಡ್ಯದಲ್ಲಿ ಮೋದಿ ಏನೇನ್ ಮಾಡ್ತಾರೆ.? ಮೋದಿ ಮಂಡ್ಯ ಕಾರ್ಯಕ್ರಮದ ವಿವರ