Wednesday, October 30, 2024

Latest Posts

ಸೌರಭ್ ಮದುವೆಗೆ ಬಂದ್ರೆ ಒದ್ದು ಓಡಿಸಲಾಗುವುದು: ಆಮಂತ್ರಣ ಪತ್ರಿಕೆಯಲ್ಲಿ ಬರೆದ ವಿಚಿತ್ರ ಲೈನ್ ವೈರಲ್

- Advertisement -

Uttar Pradesh: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಆಶೀರ್ವಾದವೇ ಉಡುಗೊರೆ, ನಿಮ್ಮ ಉಪಸ್ಥಿತಿಯೇ ಉಡುಗೊರೆ, ಮರೆಯದೇ ಬನ್ನಿ ಅಂತೆಲ್ಲ ಹಾಕಿರುತ್ತಾರೆ.

ಆದರೆ ಉತ್ತರಪ್ರದೇಶದಲ್ಲಿ ನಡೆದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸೌರಭ್ ಮದುವೆಗೆ ಬಂದರೆ, ಅಥವಾ ಮದುವೆ ಮನೆಯಲ್ಲಿ ಕಾಣಿಸಿಕೊಂಡರೆ, ಒದ್ದು ಓಡಿಸಲಾಗುವುದು ಎಂದು ಬರೆಯಲಾಗಿದೆ. ಉತ್ತರಪ್ರದೇಶದ ಇಟಾ ಜಿಲ್ಲೆಯ ಬಿಚ್‌ಪುರಿ ಗ್ರಾಮದಲ್ಲಿ ರೋಹಿತ್ ಮತ್ತು ರಜಿನಿ ಎಂಬ ಜೋಡಿಯ ಮದುವೆ ನಡೆಯಲಿಕ್ಕೆ ಇತ್ತು. ಇವರ ಮದುವೆಗೆ ಕಾರ್ಡ್ ಪ್ರಿಂಟ್ ಮಾಡಿಸಿದ್ದು, ಅದರಲ್ಲಿ ಈ ರೀತಿಯಾಗಿ ಬರೆಯಲಾಗಿತ್ತು. ಸೌರಭ್ ಮದುವೆಗೆ ಬಂದ್ರೆ ಒದ್ದು ಓಡಿಸುವುದಾಗಿ ಹೇಳಲಾಗಿತ್ತು.

ಹೀಗ್ಯಾಕೆ ಬರೆದಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಆದರೆ ಇದು ಟ್ರೋಲ್ ಆಗುತ್ತಿದ್ದಂತೆ, ಸೌರಭ್ ಎಂಬಾತನ ಮಾಜಿ ಪ್ರೇಯಸಿಯನ್ನೇ ರೋಹಿತ್ ವಿವಾಹವಾಗುತ್ತಿರಬಹುದು ಎಂದು ಹಲವರು ಅಂದಾಜು ಮಾಡಿದ್ದಾರೆ. ಅಲ್ಲದೇ, ಸೌರಭ್ ಅನ್ನುವ ವ್ಯಕ್ತಿಯನ್ನು ಟ್ಯಾಗ್ ಮಾಡಿ ಎಂದು ಈ ಆಮಂತ್ರಣ ಪತ್ರಿಕೆಯ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದೇನೆ ಇರಲಿ, ಆಮಂತ್ರಣ ಪತ್ರಿಕೆಯಲ್ಲಿ ಈ ರೀತಿ ಹೆಸರು ಹಾಕಿ ಬೈದು ಹಾಕಿದ್ದಾರೆಂದರೆ, ಅವನ ಮೇಲೆ ಅದೆಷ್ಟು ಸಿಟ್ಟಿರಬಾರದು ಅಂತಲೇ ಜನ ಕಾಮೆಂಟ್ ಮಾಡುತ್ತಿದ್ದಾರೆ.

- Advertisement -

Latest Posts

Don't Miss