- Advertisement -
ವೀರೆಂದ್ರ ಶೆಟ್ಟಿ ಅವರು ಸ್ವತಃ ರಚಿಸಿ, ನಿರ್ದೇಶಿಸಿ, ಅಭಿನಯಿಸಿ ಹಾಗು ನಿರ್ಮಾಣ ಮಾಡಿರುವ ಚಿತ್ರ ಸವರ್ಣದೀರ್ಘ ಸಂಧಿ. ವಿದ್ಯಾರ್ಹತೆ ಇಲ್ಲದಿದ್ದರೂ ಕನ್ನಡ ವ್ಯಾಕರಣದಮೇಲೆ ಇನ್ನಿಲ್ಲದ ಪ್ರೇಮ. ಸಿಕ್ಕಿ ಬೀಳದ ಹಾಗೆ ಅಪರಾಧಗಳನ್ನ ಮಾಡುವ ಗ್ಯಾಂಗ್. ಕನ್ನಡ ಪ್ರೇಮಿಯ ರೌಡಿಸಮ್ ಈ ಚಿತ್ರದ ಹೈಲೈಟ್. ಟ್ರೈಲರ್ ನಲ್ಲಿ ಕೆಲವಾರು ಎಮೊಶನಲ್ ಸೀಕ್ವೆನ್ಸ ಇದೆ. ಮ್ಯೂಸಿಕ್ ಬಹಳ ಸೊಗಸಾಗಿ ಮೂಡಿಬಂದಿದೆ. ಹಲವು ದಿನಗಳ ನಂತರ ಮನೊ ಮೂರ್ತಿರವರು ಸಂಗೀತವನ್ನ ನೀಡಿದ್ದಾರೆ. ಕೊಳಲಾದೆನಾ ಹಾಡು ಇಂಪಾಗಿ ಕಿವಿಗಳಿಗೆ ಅಪ್ಪಳಿಸಲಿದೆ.
ಹಿರೊ ಆತ್ಮವಿಶ್ವಾಸ ಇಲ್ಲಿ ಎದ್ದು ಕಾಣುತ್ತೆ. ಕಾಮಿಡಿ, ಎಮೊಷನ್, ಆಕ್ಷನ್ ಎಲ್ಲದರ ಪಯಣ ಸವರ್ಣದೀರ್ಘ ಸಂಧಿ. ಇದೆ ಅಕ್ಟೊಬರ್ ಗೆ ಚಿತ್ರ ರಿಲೀಸ್ ಆಗಲಿದ್ದು, ಯಶಸ್ಸನ್ನ ಕಾಣಲಿ ಅಂತ ಆಶಿಸೊಣ.
- Advertisement -