Special Story: ತಮ್ಮ ನಟನೆ, ನಿರೂಪಣೆಯಿಂದ ಪ್ರಸಿದ್ಧ ಪಡೆದಿರುವ ಕಾವ್ಯಾ ಶಾ ಅವರು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರ್ತಾರೆ. ವೇಷ್ಯೆ ಪಾತ್ರ, ಕುಡುಕನ ಪಾತ್ರ, ಹೀಗೆ ಅನೇಕ ಪಾತ್ರಗಳನ್ನು ಧೈರ್ಯವಾಗಿ, ಶ್ರದ್ಧೆಯಿಂದ ನಿರ್ವಹಿಸುವ ಇವರು, ಜೀವನ ನಿರ್ವಹಿಸುವ ಬಗ್ಗೆ ಹಲವು ಟಿಪ್ಸ್ ನೀಡುತ್ತಿರುತ್ತಾರೆ.
ಅಂಥದ್ದೇ 1 ವೀಡಿಯೋ ಇದೀಗ ಸಖತ್ ವೈರಲ್ ಆಗಿದ್ದು, 15 ವರ್ಷಗಳ ಹಿಂದೆ ಕಾವ್ಯಾ ಶಾಗೆ ಎಂಥ ಅವಮಾನವಾಗಿತ್ತು. ಆದರೆ ಆಕೆ ಹೇಗೆ ಅದನ್ನ ಮೆಟ್ಟಿನಿಂತು, ಇಂದು ಸಾಧನೆ ಮಾಡಿದ್ದಾರೆಂದು ವಿವರಿಸಿದ್ದಾರೆ.
15 ವರ್ಷಗಳ ಹಿಂದೆ ಡಾನ್ಸ್ ಶೋ ನಲ್ಲಿ ಕಾವ್ಯಾ ಅವರ ಸಂದರ್ಶನವನ್ನೂ ತೆಗೆದುಕ“ಳ್ಳದೇ, ರಿಜೆಕ್ಟ್ ಮಾಡಿದ್ದರು. ಅವತ್ತು ಇಡೀ ರಾತ್ರಿ ಕಾವ್ಯಾ ಅವರು ಕಣ್ಣೀರು ಹಾಕಿದ್ದರಂತೆ. ಭರತನಾಟ್ಯ ಕಲಾವಿದೆಯಾಗಿದ್ದು, ಯಾವ ಡಾನ್ಸ್ ಕಾಂಪಿಟೇಷನ್ಗೆ ಹೋದ್ರೂ, ಕಾವ್ಯಾ ಅವರಿಗೆ ಪ್ರೈಸ್ ಬಂದೇ ಬರ್ತಿತ್ತಂತೆ. ಆದರೆ ರಿಯಾಲಿಟಿ ಶೋನಲ್ಲಿ ಮಾತ್ರ ಆಡಿಶನ್ ನೀಡಲೂ ಅವಕಾಶ ನೀಡದೇ, ಮನೆಗೆ ಕಳುಹಿಸಿದ್ದರಂತೆ.
ಕೆಲ ದಿನಗಳ ಕಾಲ ಬೇಸರದಲ್ಲೇ ಇದ್ದರೂ, ಛಲ ಬಿಡದೇ, ಕಾವ್ಯಾ ಕಲಾ ಸರಸ್ವತಿಯ ಆರಾಧನೆ ಮುಂದುವರಿಸಿದ್ದರು. ಇದೀಗ 15 ವರ್ಷದ ಬಳಿಕ ಕಾವ್ಯಾ ಅವರು ಡಾನ್ಸ್ ಕಾಂಪಿಟೇಶನ್ಗೆ ಜಡ್ಜ್ ಆಗಿ, ಅಮೆರಿಕಕ್ಕೆ ತೆರಳಿದ್ದಾರೆ. ಏಪ್ರಿಲ್ನಲ್ಲಿ ಮತ್ತು ಈಗ ಕೆಲ ದಿನಗಳ ಹಿಂದೆ ಕಾವ್ಯಾ ಡಾನ್ಸ್ ಕಾಂಪಿಟೇಷನ್ಗೆ ಜಡ್ದ್ ಆಗಿ, ಅಮೆರಿಕಕ್ಕೆ ಹೋಗಿದ್ದಾರೆ.
ಇವರ ಪ್ರಯಾಣ, ವಸತಿ ಎಲ್ಲದರ ವ್ಯವಸ್ಥೆಯನ್ನೂ ಕಾಂಪಿಟೇಶನ್ ಮಾಡುವವರೇ ಮಾಡಿದ್ದಾರಂತೆ. ಹಾಗಾಗಿ ಯಾವತ್ತೂ ದೇವರ ಪ್ಲಾನ್ ಬಗ್ಗೆ ಮತ್ತು ನಿಮ್ಮ ಬಗ್ಗೆ ಸದಾ ನಂಬಿಕೆ ಇರಲಿ ಅಂತಾರೆ ಕಾವ್ಯಾ ಶಾ.




