Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿನಮ್ಮಸರ್ಕಾರ ಉತ್ತಮನಿರ್ಧಾರ ಮಾಡಿತ್ತು.ಈಗಿನ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಮುಸ್ಲೀಂರ ಓಲೈಕೆ ಮಾಡುತ್ತಿದೆ. ಮುಸ್ಲೀಂರಿಗೆ ಇದ್ದಿದ್ದ 4 ಪ್ರತಿಶತ ಮೀಸಲಾತಿ ತೆಗೆದು ಹಾಕಿದ್ದಕ್ಕೆ ಕಾಂಗ್ರೆಸ್ ನವರಿಗೆ ಹೊಟ್ಟೆಉರಿ ಇದೆ.
ಕಾಂಗ್ರೆಸ್ ನಲ್ಲಿರುವ ಲಿಂಗಾಯತ ಸಮಾಜದ ಶಾಸಕರು ಸಮಾಜದ ಮತಗಳಿಂದಲೇ ಅಧಿಕಾರ ಪಡೆದಿದ್ದಾರೆ. ಕಾಂಗ್ರೆಸ್ ನಲ್ಲಿದ್ದವರ ಎಲ್ಲರದ್ದೂ ಜವಾಬ್ದಾರಿ ಇದೆ. ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನ ಕಾಂಗ್ರೆಸ್ ನಲ್ಲಿರುವ ಲಿಂಗಾಯತ ನಾಯಕರು ಮಾಡಬೇಕು. ನಮ್ಮ ಹೋರಾಟದ ಮೂಲಕ ಎಲ್ಲವೂ ಗೊತ್ತಾಗಲಿದೆ. ನಮ್ಮ ಹೋರಾಟ ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇವೆ ಎಂದು ಬೆಲ್ಲದ್ ಹೇಳಿದ್ದಾರೆ.
ಬಿಜೆಪಿ ಜನತಾ ಜಾಗೃತಿ ಟೀಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ್, ನಾವೆಲದಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ಯತ್ನಾಳ್, ಲಿಂಬಾವಳಿ, ಜಾರಕಿಹೊಳಿಯವರ ನೇತೃತ್ವದಲ್ಲಿ ಟೀಂ ಮಾಡಲಾಗಿದೆ. ಆದ್ರೆ ಯಾವುದೆ ಅಸಮಾಧಾನವಿಲ್ಲ. ಒಂದು ಮನೆ ಎಂದ ಮೇಲೆ ಬೇರೆ ಬೇರೆ ವಿಚಾರ ಇದ್ದೇ ಇರುತ್ತೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯ ಇಲ್ಲ ಎಂದು ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ.
ಆಪರೇಶನ್ ಕಮಲ ವಿಚಾರವಾಗಿ ಸಿಎಂ ಆರೋಪದ ಬಗ್ಗೆ ಬೆಲ್ಲದ್ ಪ್ರತಿಕ್ರಿಯಿಸಿದ್ದು, ಅದರ ಅವಶ್ಯಕತೆ ನಮಗೆ ಇಲ್ಲ. ಒಂದು ರಸ್ತೆ ಅಭಿವೃದ್ದಿ ಮಾಡಲು ಆಗ್ತಾಇಲ್ಲ ಅಂತಾ ಖರ್ಗೆ ಅವರೇ ಸಿಎಂಗೆ ಡಿಸಿಎಂ ಗೆ ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಅಧಿಕಾರ ಮಾಡಲು ಆಗ್ತಾ ಇಲ್ಲ. ಹೀಗಾಗಿ ವಿಷಯಾಂತರ ಮಾಡುತ್ತಿದ್ದಾರೆ. ಗ್ಯಾರಂಟಿ ಬಗ್ಗೆ ಹೇಳ್ತಾರೆ ಮೋದಿಯವರು ಕೊಟ್ಟ ಅಕ್ಕಿ ವಿತರಿಸುತ್ತಿದ್ದಾರೆ. ರೇಷನ್ ಕಾರ್ಡ್ ಸಮರ್ಪಕವಾಗಿ ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇರೋ ರೇಷನ್ ಕಾರ್ಡ್ ಗಳನ್ನೇ ರದ್ದು ಮಾಡುತ್ತಿದ್ದಾರೆ. ಸರ್ಕಾರ ಏನು ಮಾಡ್ತಾಇದೆ ಅಂತ ಜನ ನೋಡ್ತಿದಾರೆ. ರಾಜ್ಯಕ್ಕೆ ಆಗುತ್ತಿರೋ ಅನ್ಯಾಯದ ಬಗ್ಗೆ ಜನ ಗಮನಿಸುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಬರುವ ಅನುದಾನವನ್ನ ದಕ್ಷಿಣ ಕರ್ನಾಟಕಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಅನುದಾನದ ವಿಚಾರದಲ್ಲಿ ಬೈರತಿ ಸುರೇಶ ಅವರು ಅನ್ಯಾಯ ಮಾಡುತ್ತಿದ್ದಾರೆ. ಈ ಅನ್ಯಾಯವನ್ನ ಯಾರೂ ಸಹಿಸಲ್ಲ. ಭ್ರಷ್ಟಾಚಾರದಿಂದ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ.ಸರ್ಕಾರ ಡಂಬಾಚಾರ , ಬಂಡಾಚಾರ ಬಿಟ್ಟು ಜನರ ಸೇವೆ ಮಾಡಲಿ. ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕೊಡುವಂತ ಕೆಲಸಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೆಲ್ಲದ್ ಹರಿಹಾಯ್ದಿದ್ದಾರೆ.