Friday, November 14, 2025

Latest Posts

ಭಯಾನಕ ವೀಡಿಯೋ ವೈರಲ್: ತಾನಾಗೇ ಓಪನ್ ಆದ ಆಫೀಸು ಬಾಗಿಲು, ಸಿಬ್ಬಂದಿಯನ್ನು ಮಾತನಾಡಿಸಿದ ಆತ್ಮ

- Advertisement -

National News: ನೀವು ಒಂದು ಆಫೀಸಿನಲ್ಲಿ ನೈಟ್ ಶಿಫ್ಟ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಆಫೀಸಿಗೆ 3 ಗಂಟೆ ಸಮಯದಲ್ಲಿ ಓರ್ವ ವ್ಯಕ್ತಿ ಬಂದು ನಿಮ್ಮೊಟ್ಟಿಗೆ ಮಾತನಾಡಿ, ನಿಮ್ಮ ಆಫೀಸಿನ ಒಳಗೆ ಬಂದು ಕೂತರೂ, ನಿಮಗೆ ಅದು ವ್ಯಕ್ತಿಯಲ್ಲ ಆತ್ಮ ಅಂತ ಗೊತ್ತಾಗುವುದಿಲ್ಲ. ಆದರೆ ಮರುದಿನ ನೀವು ಆ ಆಫೀಸಿನೊಳಗಿನ ಸಿಸಿಟಿವಿ ಕ್ಯಾಮೆರಾ ನೋಡಿದಾಗ, ನೀವೂ ರಾತ್ರಿ ಮಾತನಾಡಿದ್ದು, ಮನುಷ್ಯನ ಬಳಿ ಅಲ್ಲ ದೆವ್ವದ ಬಳಿ ಅಂತಾ ಗೊತ್ತಾದಾಗ, ನಿಮಗೆ ಹೇಗೆನ್ನಿಸಬಹುದು..?

ಇದೇ ರೀತಿಯ ನಿಜವಾದ ಘಟನೆಯೊಂದು ಆಫೀಸೊಂದರಲ್ಲಿ ನಡೆದಿದೆ ಎಂಬ ವೀಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು, ಆ ಆತ್ಮವನ್ನು ಎದುರಿಸಿರುವ ಸಿಬ್ಬಂದಿಗಷ್ಟೇ ಗೊತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಸಿಬ್ಬಂದಿ ನೈಟ್ ಶಿಫ್ಟ್ ಮಾಡುತ್ತಿದ್ದ. ಆಗ ಸುಮಾರು 3 ಗಂಟೆಗೆ, ತನ್ನಿಂದ ತಾನೇ ಬಾಗಿಲು ತೆರೆದಿದೆ. ಮತ್ತು ಆತ್ಮ ಸಿಬ್ಬಂದಿಯ ಬಳಿ ಬಂದು ಮಾತನಾಡಿದೆ. ಆ ಆತ್ಮ ಸಿಬ್ಬಂದಿಗಷ್ಟೇ ಕಂಡಿದ್ದು, ಆತ ಅದರೊಂದಿಗೆ ಮಾತನಾಡಿದ್ದಾರೆ. ವೀಡಿಯೋ ವೈರಲ್ ಆದಾಗಲೇ ಅದು ಆತ್ಮ ಅಂತಾ ಅವನಿಗೆ ಗೊತ್ತಾಗಿದೆ.

ಕೆಲವರು ಇದು ಫೇಕ್ ವೀಡಿಯೋ, ಎಡಿಟ್ ಮಾಡಲಾಗಿದೆ ಎಂದಿದ್ದಾರೆ. ಮತ್ತೆ ಕೆಲವರು, ಇದೆಲ್ಲ ಭ್ರಮೆ ಎಂದಿದ್ದಾರೆ. ಮತ್ತೆ ಕೆಲವರು ಈ ವೀಡಿಯೋವನ್ನು ಆ ಸಿಬ್ಬಂದಿ ನೋಡಿದರೆ, ಅವನು ಜ್ವರ ಬಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ ಎಂದಿದ್ದಾರೆ.

- Advertisement -

Latest Posts

Don't Miss